ಮೂಲ್ಕಿ: ಅಂಗನವಾಡಿಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಾಗೂ ಪೌಷ್ಟಿಕ ಆಹಾರದ ಜತೆಗೆ ಶಿಸ್ತು, ಸಂಸ್ಕೃತಿ, ಸಂಸ್ಕಾರ ತಿಳಿವಳಿಕೆ ಮೂಡಿಸುವ ಕಾರ್ಯವಾಗಬೇಕು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು, ಮೂಲ್ಕಿ ನಗರ ಪಂಚಾಯಿತಿ ಸಹಭಾಗಿತ್ವದಲ್ಲಿ ಎಂಆರ್‌ಪಿಎಲ್ ಸಿಎಸ್‌ಆರ್‌ನ 20 ಲಕ್ಷ ರೂ. ಅನುದಾನದಿಂದ ಮೂಲ್ಕಿಯ ಕೆ.ಎಸ್ ರಾವ್ ನಗರದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಆರ್‌ಪಿಎಲ್ ಅಧಿಕಾರಿ ಕೇಶವ ಪಾಟೀಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ, ಮೂಲ್ಕಿ ನಪಂ ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಮಧುಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್, ಭೀಮಾ ಶಂಕರ್, ಪುರುಷೋತ್ತಮ ಬಡಗುಹಿತ್ಲು, ವಿಠಲ್ ಎನ್.ಎಂ, ಅಶೋಕ್ ಜನನಿ, ಪ್ರಶಾಂತ್ ಕೆ.ಎಸ್. ರಾವ್ ನಗರ, ಶಿವಾನಂದ ಆರ್‌ಕೆ, ಜಿ.ಪಂ ಇಂಜಿನಿಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಬಶೀರ್ ಜೋಕಟ್ಟೆ, ಹರಿಶ್ಚಂದ್ರ, ನವೀನ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು. ಭಾರತಿ ಸ್ವಾಗತಿಸಿದರು. ಶಿವಾನಂದ ಆರ್.ಕೆ ನಿರೂಪಿಸಿದರು.