ಕುಂದಾಪುರ: ವೃತ್ತಿ ಬದುಕಿನ ಜಂಜಾಟದ ನಡುವೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆತಾಗ ಸದಸ್ಯರಿಗೆ ಸ್ಫೂರ್ತಿ, ಪರಸ್ಪರ ಪರಿಚಯ, ಹೊಸ ಸದಸ್ಯರ ಪಾಲ್ಗೊಳ್ಳುವಿಕೆ ಹೆಚ್ಚುವ ಜತೆಗೆ ಸಮಾಜ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ದೊರೆಯುತ್ತದೆ ಎಂದು ರೋಟರಿ ವಲಯ 1ರ ಮಾಜಿ ಸಹಾಯಕ ಗವರ್ನರ್ ಎಚ್.ಗಣೇಶ್ ಕಾಮತ್ ಹೇಳಿದರು.
ರೋಟರಿ ಕ್ಲಬ್ ಗಂಗೊಳ್ಳಿ ಆತಿಥ್ಯದಲ್ಲಿ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೊಡ್ಮನೆ ನಂದ ಪೂಜಾರಿ ರಂಗ ಮಂಟಪದಲ್ಲಿ ಭಾನುವಾರ ರೋಟರಿ ವಲಯ-1ರ ವಲಯ ಮಟ್ಟದ ಸಾಂಸ್ಕೃತಿಕ ಉತ್ಸವ- 2024 ಗಂಗಾತರಂಗ ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ಡಾ.ಬಿ.ರಾಜೇಂದ್ರ ಶೆಟ್ಟಿ, ಲರ್ನಿಂಗ್ ಫೆಸಿಲಿಟೇಟರ್ ಡಾ.ಉಮೇಶ್ ಪುತ್ರನ್, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ, ವಲಯ 1ರ ಸಾಂಸ್ಕೃತಿಕ ಸಂಯೋಜಕ ಶಶಿಧರ ಶೆಟ್ಟಿ, ವಲಯ ಸೇನಾನಿಗಳಾದ ಪ್ರದೀಪ್ ಡಿ.ಕೆ., ವೆಂಕಟೇಶ್ ನಾವುಂದ ಉಪಸ್ಥಿತರಿದ್ದರು.
ಗಂಗೊಳ್ಳಿ ರೋಟರಿ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್ ಸ್ವಾಗತಿಸಿ, ಗಂಗಾತರಂಗ ಅಧ್ಯಕ್ಷ ಉಮೇಶ್ ಎಲ್.ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಾಲಾಶ್ರೀ ವಂದಿಸಿದರು. ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು.