ಜಿಲ್ಲೆ

ಸಾಧನೆ ಕರಗತವಾದರೆ ಭವಿಷ್ಯ ಉತ್ತಮ : ಭಾರತ ಸ್ಕೌಟ್ಸ್-ಗೈಡ್ಸ್ ಉದ್ಘಾಟಿಸಿ ಭರತ್‌ರಾಜ್ ಅಭಿಮತ

ಸೌಮ್ಯ ಆರ್

ಕಡಬ: ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್-ಗೈಡ್ಸ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಜಿಲ್ಲಾ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕೆ. ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿ ಜೀವನ ಅಮೂಲ್ಯ. ಸಾಧನೆ ಕರಗತ ಮಾಡಿಕೊಂಡರೆ ಉತ್ತಮ ಭವಿಷ್ಯ ರೂಪಿತವಾಗುತ್ತದೆ ಎಂದರು.

ಶಾಲಾ ಸಂಚಾಲಕ ಪೌಲ್ ಜೇಕಬ್, ಆಡಳಿತ ಮಂಡಳಿಯ ಕೋಶಾಧಿಕಾರಿ ಸೈಮನ್ ಕೆ.ಸಿ, ಮುಖ್ಯಶಿಕ್ಷಕಿ ಜ್ಯೋತಿ ಎಸ್.ಕೆ, ಗೈಡ್ಸ್ ಶಿಕ್ಷಕಿ ಪ್ರಿಯಾ ಎ, ಸ್ಕೌಟ್ಸ್ ಮಾಸ್ಟರ್ ವಿಶ್ವತ್ ಪಿ. ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅಕ್ಷತಾ ಕೆ. ಸ್ವಾಗತಿಸಿದರು. ಸಂಗೀತಾ ವಂದಿಸಿದರು. ಪ್ರಭಾವತಿ ನಿರೂಪಿಸಿದರು.