ಗಂಗಾವತಿ ತಾಲೂಕಿನ ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಚರ್ಮರೋಗ ತಪಾಸಣೆ ಉಚಿತ ಶಿಬಿರದಲ್ಲಿ ಚರ್ಮರೋಗ ತಜ್ಞ ಡಾ. ರಮೇಶ ಶುಕ್ರವಾರ ಮಾತನಾಡಿದರು.  
ಜಿಲ್ಲೆ

ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕುಷ್ಠರೋಗ ನಿವಾರಣೆ

ಶಶಿಧರ ಎಲ್

ಗಂಗಾವತಿ: ತಾಲೂಕಿನ ವೆಂಕಟಗಿರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ನಿವಾರಣೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಚರ್ಮರೋಗ ತಪಾಸಣೆ ಉಚಿತ ಶಿಬಿರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ 156 ಜನರನ್ನು ಪರೀಕ್ಷಿಸಲಾಯಿತು. ಒಂದು ಕುಷ್ಠರೋಗ ಪ್ರಕರಣ ದೃಢಪಟ್ಟಿದ್ದು, ಸ್ಥಳದಲ್ಲಿ ಎಂಡಿಟಿ ಚಿಕಿತ್ಸೆಗೆ ಚಾಲನೆ ನೀಡಲಾಯಿತು.

ಚರ್ಮರೋಗ ತಜ್ಞ ಡಾ. ರಮೇಶ ಮಾತನಾಡಿ, ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಕುಷ್ಠರೋಗ ನಿವಾರಣೆ ಮಾಡಬಹುದಾಗಿದ್ದು, ಇದರ ನಿರ್ಮೂಲನೆಗಾಗಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಶ್ರಮಿಸಿದ್ದರು. ರೋಗ ನಿವಾರಣೆಗೆ ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅಂಜುಮ್ತಾಜ್, ಡಾ.ಸಂತೋಷ, ಕುಷ್ಠರೋಗ ವಿಭಾಗದ ಮೇಲ್ವಿಚಾರಕರಾದ ಜಯಪ್ರಕಾಶ, ವೀರಭದ್ರಪ್ಪ, ಸುರೇಶ, ಆರೋಗ್ಯ ಕಾರ್ಯಕರ್ತೆಯರಾದ ದೇವಮ್ಮ, ಜಡಿಯಪ್ಪ ಇತರರಿದ್ದರು.