ಜಿಲ್ಲೆ

ಮರಳು ಅಕ್ರಮ ಸಾಗಾಟ, ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಡಬ: ಕುಮಾರಧಾರ ನದಿಯಿಂದ ಮರಳು ಅಕ್ರಮವಾಗಿ ಸಂಗ್ರಹಿಸಿ ಟಿಪ್ಪರ್‌ಗಳಲ್ಲಿ ವಿವಿಧ ಕಡೆ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಇಬ್ಬರ ವಿರುದ್ಧ ಬೆಳ್ಳಾರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಳು, ಸಾಗಾಟಕ್ಕೆ ಬಳಕೆ ಮಾಡಲಾದ ವಾಹನಗಳನ್ನು ವಶಕ್ಕೆ ಪಡೆಕೊಂಡಿದ್ದಾರೆ.

ಮೆದು ನಿವಾಸಿ ದಿನೇಶ್ ಮೆದು ಮತ್ತು ನೂಜಿ ನಿವಾಸಿ ಚೆನ್ನಪ್ಪ ಗೌಡ ಎಂಬುವರು ಕುಮಾರಧಾರ ನದಿಯಿಂದ ಮರಳು ಸಂಗ್ರಹಿಸಿ ಟಿಪ್ಪರ್‌ಗಳಲ್ಲಿ ಮಾರಾಟ ಮಾಡುತ್ತಿರುವ ಕುರಿತು ಟಿಪ್ಪರ್ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು 70 ಲಕ್ಷ ರೂ ಮೌಲ್ಯದ 6 ಟಿಪ್ಪರ್, 1 ಹಿಟಾಚಿ, 60 ಸಾವಿರ ರೂ.ಮೌಲ್ಯದ ಮರಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆರು ಪ್ರತ್ಯೇಕ ಪ್ರಕರಣ ಬೆಳ್ಳಾರೆ ಠಾಣೆಯಲ್ಲಿ ದಾಖಲಾಗಿದೆ.