ಕುಂದಾಪುರ: ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಮರೀಚಿಕೆಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ನಾವಂದುಕೊಂಡ ರೀತಿಯಲ್ಲಿ ಅನುದಾನ ಮಂಜೂರು ಆಗುತ್ತಿಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ಮೀಸಲಿಡುತ್ತಿದೆ. ಒಂದೊಂದು ಊರಿಗೆ ಒಂದೊಂದು ರಸ್ತೆ ಆಗುತ್ತಾ ಹೋದರೆ ಊರು ಅಭಿವೃದ್ಧಿ ಆಗುತ್ತದೆ. ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ನಿರ್ಮಿಸಲು ಪ್ರಯತ್ನಿಸುವುದಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಬೈಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಂಜೂರು ಕೆತ್ತಮಕ್ಕಿ ಎಸ್‌ಸಿ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿಯ ಅಂದಾಜು 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ವಾತನಾಡಿದರು.
ಗುಲ್ವಾಡಿ ಗ್ರಾ.ಪಂ. ಸದಸ್ಯ ರಾಮಕೃಷ್ಣ ಹೆಬ್ಬಾರ್, ತಾ.ಪಂ. ವಾಜಿ ಸದಸ್ಯ ಕರಣ್ ಪೂಜಾರಿ, ದಿವ್ಯಾನಂದ ಶೆಟ್ಟಿ, ರಾಮ ಅಡಿಗ, ಸ್ಥಳೀಯರು ಉಪಸ್ಥಿತರಿದ್ದರು. ಸಂತೋಷ ಪೂಜಾರಿ ಸ್ವಾಗತಿಸಿದರು. ಸುರೇಂದ್ರ ಗುಲ್ವಾಡಿ ವಂದಿಸಿದರು.