ಶಂಕರಲಿಂಗಯ್ಯ 
ಜಿಲ್ಲೆ

ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

ದೇವದುರ್ಗ: ತಾಲೂಕಿನ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಖಾಸಗಿ ಶಾಲಾ ಶಿಕ್ಷಕರ ಸಂಘದಿಂದ ಸೆ.14ರಂದು ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ತಾತ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ 10 ಗಂಟೆಗೆ ಶಿಕ್ಷಕರ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅಭಿನವ ಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯರು, ತಿಂಥಣಿ ಬ್ರಿಡ್ಜ್‌ನ ಸಿದ್ಧರಾಮಾನಂದಪುರಿ ಸ್ವಾಮೀಜಿ, ದೇವರಗುಡ್ಡ ಗಿರಿಮಲ್ಲೇಶ್ವರ ಶಿವಾಚಾರ್ಯರು, ವೀರಗೋಟದ ಅಡವಿಲಿಂಗ ಮಹಾರಾಜರು, ಸಿದ್ದಯ್ಯತಾತ ಗುರುವಿನ ಗಬ್ಬೂರು, ಸೈಯದ್ ಜಹೀರ್ ಪಾಷಾ ತಾತ ಸಾನ್ನಿಧ್ಯವಹಿಸುವರು.

ಎಂಎಲ್ಸಿ ಶಶೀಲ್ ಜಿ.ನಮೋಶಿ, ಪ್ರಮುಖರಾದ ಚಂದ್ರಶೇಖರ ಪಾಟೀಲ್, ಮೇಜರ್ ಆನಂದ, ಭಾನುಪ್ರಕಾಶ ಖೇಣೇದ್ ಇತರ ಗಣ್ಯರು ಭಾಗವಹಿಸುವರು. ಮಧ್ಯಾಹ್ನ 2ಗಂಟೆಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸುವರು. ಜಾಲಹಳ್ಳಿ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಬೂದಿಬಸವ ಶಿವಾಚಾರ್ಯರು,

ನಿಜಲಿಂಗ ಸ್ವಾಮೀಜಿ, ಗುರುಬಸವ ರಾಜಗುರು ಸಾನ್ನಿಧ್ಯವಹಿಸುವರು. ಸಂಸದ ಜಿ.ಕುಮಾರ ನಾಯಕ, ಶಾಸಕ ಹಂಪನಗೌಡ ಬಾದರ್ಲಿ, ನಾಗರಾಜ ಮಸ್ಕಿ ಇತರರು ಭಾಗವಹಿಸವರು ಎಂದು ತಿಳಿಸಿದರು. ಮುಖಂಡರಾದ ಮಾರೆಪ್ಪ ಕೊತ್ತದೊಡ್ಡಿ, ಅಯ್ಯಪ್ಪ ಕೊಂಗಂಡಿ, ಸಿದ್ದಯ್ಯ ಸ್ವಾಮಿ, ಬಲಭೀಮ ಹೂಗಾರ, ಮಲ್ಲಪ್ಪ ಕುಂಬಾರ, ಬಸವರಾಜ ಕೊಪ್ಪರ, ಗಂಗಣ್ಣ ಪೂಜಾರಿ ಇತರರಿದ್ದರು.