ವಿಜಯಪುರದ ಎಂಜಿ ರಸ್ತೆಯಲ್ಲಿರುವ ಶ್ರೀ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಸದಾಶಿವ ಪವಾರ, ಶಂಕರ ಕನಸೆ, ಸಂಜಯ ಜಂಬೂರೆ ಮತ್ತಿತರರಿದ್ದಾರೆ. 
ಜಿಲ್ಲೆ

ಶಿವಾಜಿ ಮಹಾರಾಜರ ಆದರ್ಶ ಪಾಲಿಸಿ

ಗಿರೀಶ ಸಗರ

ವಿಜಯಪುರ: ನಗರದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

ಬ್ಯಾಂಕಿನ ಕಚೇರಿಯಲ್ಲಿ ಅಧ್ಯಕ್ಷ ಡಾ. ಸದಾಶಿವ ಪವಾರ ಅವರು ಶಿವಾಜಿ ಮಹಾರಾಜರ ಕಂಚಿನ ಮೂತಿಗೆ ಪುಷ್ಪಾರ್ಚನೆಗೈದು, ಶಿವಾಜಿ ಮಹಾರಾಜರು ಸಂಸ್ಕೃತಿ ಮತ್ತು ರಾಷ್ಟ್ರಗಳ ಸಂರಕ್ಷಣೆಯಲ್ಲಿ ಇಡೀ ಭಾರತವೇ ಮೆಚ್ಚಿದ ಒಬ್ಬ ಶ್ರೇಷ್ಠ ಚಕ್ರವರ್ತಿ.

ತಮ್ಮ ಬಾಲ್ಯದಲ್ಲಿಯೇ ತಾಯಿ ಜೀಜಾಬಾಯಿಯಿಂದ ರಾಮಾಯಣ ಮತ್ತು ಮಹಾ ಭಾರತದಂತಹ ಪುರಾಣ ಪುಣ್ಯಕಥೆಗಳನ್ನು ಕೇಳಿ ತಮ್ಮಲ್ಲಿ ಅಳವಡಿಕೊಂಡು ವೀರ, ಧರ್ಮ ನಿಷ್ಠನಾಗಿ ಸ್ತ್ರೀ ಮತ್ತು ಹಿರಿಯರನ್ನು ಗೌರವದಿಂದ ಕಾಣುತ್ತಿದ್ದರು ಎಂದರು.

ಶಿವಾಜಿ ಮಹಾರಾಜರು ಭಾರತದ ಯಾವುದೇ ಒಂದು ಜನಾಂಗಕ್ಕೆ ಅಥವಾ ಪ್ರಾಂತ್ಯಕ್ಕೆ ಸೀಮಿತವಾಗದೇ ಎಲ್ಲರನ್ನು ಸಮಾನತೆಯಿಂದ ಗೌರವಿಸುತ್ತಿದ್ದರು. ಅವರು ಒಬ್ಬ ಉತ್ತಮ ಆಡಳಿತಗಾರರು ಕೂಡಾ ಆಗಿದ್ದರು. ಯುವ ಜನತೆ ಶಿವಾಜಿ ಮಹಾರಾಜರ ಆದರ್ಶ ಪಾಲಿಸಬೇಕೆಂದು ತಿಳಿಸಿದರು.

ನಂತರ ಶಿವಾಜಿ ವೃತ್ತಕ್ಕೆ ತೆರಳಿ ಅಲ್ಲಿನ ಶಿವಾಜಿ ಮಹಾರಾಜರ ಪುತ್ಥಳಿಗೆ ಮತ್ತು ಸರ್ಕಾರಿ ಮರಾಠಿ ಶಾಲೆಯಲ್ಲಿನ ಶಿವಾಜಿ ಮಹಾರಾಜರ ಪುತ್ಥಳಿಗೆ ಸಂಘದ ವತಿಯಿಂದ ಪೂಜೆ ನಡೆಯಿತು.

ಇದೇ ವೇಳೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‌ನ ಜಿಲ್ಲಾ ಶಾಖೆಯಿಂದ ಇಲ್ಲಿನ ಐಶ್ವರ್ಯ ನಗರದಲ್ಲಿ ನಿರ್ಮಿಸುತ್ತಿರುವ ಮರಾಠಾ ಸಮುದಾಯ ಭವನದ ಕಟ್ಟಡಕ್ಕೆ ಸಂಘದ ವತಿಯಿಂದ 1,00,001 ರೂ. ಗಳ ಚೆಕ್ಕನ್ನು ಬಿ.ಬಿ. ಶಿವಾಳಕರ ಅವರಿಗೆ ಹಸ್ತಾಂತರಿಸಲಾಯಿತು.

ಸಂಘದ ಉಪಾಧ್ಯಕ್ಷ ಶಂಕರ ಕನಸೆ, ನಿರ್ದೇಶಕರಾದ ಸಂಜಯ ಜಂಬೂರೆ, ಮಹಾದೇವ ಪವಾರ, ರವಿ ಮದಭಾವಿ, ಭಾರತ ದೇವಕುಳೆ, ಸರೋಜನಿ ನಿಕ್ಕಮ, ಮೋಹನ ಕೋರವಾರ, ಸುಧೀರ ಪವಾರ, ಚಂದ್ರಕಾಂತ ಪವಾರ, ಸದಾಶಿವ ಕದಂ, ಪ್ರವೀಣ ಬೋಡಕೆ, ಸಂಜಯ ಜಾಧವ, ಚಂದ್ರಕಾಂತ ಜಾಧವ, ಅಂಬಾದಾಸ ಚವಾಣ, ಸಿಬ್ಬಂದಿ ವರ್ಗ, ಪಿಗ್ಮಿ ಏಜೆಂಟರು ಮತ್ತಿತರರಿದ್ದರು.