ಬೈಂದೂರು: ರೋಟರಿ ವಲಯ 1ರ ಸಹಾಯಕ ಗವರ್ನರ್ ಆಗಿ ಐ.ನಾರಾಯಣ ಆಯ್ಕೆಯಾಗಿದ್ದಾರೆ. ಇವರು ವಲಯ1ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕ್ಲಬ್‌ಗಳಿಗೆ ಸಹಾಯಕ ಗವರ್ನರ್ ಆಗಿ ವಾರ್ಗದರ್ಶನ ನೀಡಲಿದ್ದಾರೆ.
2016ರಲ್ಲಿ ರೋಟರಿ ಕ್ಲಬ್ ಬೈಂದೂರಿನ ಸದಸ್ಯರಾಗಿ ರೋಟರಿ ಚಟುವಟಿಕೆಯಲ್ಲಿ ಸಕ್ರಿಯ ತೊಡಗಿಸಿಕೊಂಡ ಇವರು 2018-19ರ ಸಾಲಿಗೆ ಬೈಂದೂರು ರೋಟರಿ ಅಧ್ಯಕ್ಷರಾಗಿದ್ದರು. 2024-25ರ ಸಾಲಿನ ಆರ್‌ಐಎಲ್‌ಎಂ ಜಿಲ್ಲಾ ಚೇರ್ಮನ್ ಆಗಿ ರೋಟರಿ ಸೇವೆಯಲ್ಲಿ ಜಿಲ್ಲಾ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ವಿವಿಧ ಸಾವಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನಾರಾಯಣ ಅವರು ಉಡುಪಿ ಜಿಲ್ಲೆಯ ಟೀಚರ್ಸ್ ಕೋಆಪರೇಟಿವ್ ಬ್ಯಾಂಕ್‌ನಲ್ಲಿ ಹತ್ತು ವರ್ಷ ನಿರ್ದೇಶಕರಾಗಿ, ಒಂದು ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೈಂದೂರು ತಾಲೂಕು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂ ಅಧ್ಯಕ್ಷರಾಗಿದ್ದಾರೆ. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಪಂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.