ಜಿಲ್ಲೆ

ಕುಡಿತಕ್ಕೆ ಹಣ ಕೊಡ್ತಿಲ್ಲ ಅಂತ ಹೆಂಡ್ತಿಯನ್ನೇ ಕೊಂದ; ಪಾಪಪ್ರಜ್ಞೆ ಕಾಡಿ ಆತ್ಮಹತ್ಯೆ ಮಾಡ್ಕೊಂಡ!

ಚಿಕ್ಕೋಡಿ: ಕುಡಿತಕ್ಕೆ ಹಣ ಕೊಡುತ್ತಿಲ್ಲ ಎಂದು ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿ ಬಳಿಕ ಪಾಪಪ್ರಜ್ಞೆ ಕಾಡಿ ಒಂದೇ ವಾರದಲ್ಲಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಳವ್ವ ಮುತ್ತೆಪ್ಪ ಬಿರಾಜ್​ (33) ಕೊಲೆಯಾದ ಮಹಿಳೆ. ಮುತ್ತೆಪ್ಪ ಬಿರಾಜ್ ಕೊಲೆ ಮಾಡಿದ ಪತಿ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯವ್ಯಸನಿಯಾಗಿದ್ದ ಈತ ಪತ್ನಿ ಕುಡಿತಕ್ಕೆ ಹಣ ನೀಡುತ್ತಿಲ್ಲ ಎಂದು ಸಿಟ್ಟಿನಿಂದ ಆಕೆಯ ತಲೆಗೆ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದ. ಕಳೆದ ಮಂಗಳವಾರ ಈ ಪ್ರಕರಣ ನಡೆದಿತ್ತು.

ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಈತ ಇಂದು ತನ್ನ ತೋಟದ ಪಕ್ಕದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.