ಪೊಲೀಸರಿಂದ ಸ್ಥಳ ಪರಿಶೀಲನೆ  
ಜಿಲ್ಲೆ

ಹೆಂಡತಿಯ ಕಣ್ಮುಂದೇ ಸಾವಿಗೀಡಾದ ಗಂಡ; ಈಗ ಪತ್ನಿಯ ಸ್ಥಿತಿಯೂ ಗಂಭೀರ...

ರಾಯಚೂರು: ವಾಯುವಿಹಾರಕ್ಕೆ ಜೊತೆಯಾಗಿಯೇ ಹೋಗಿದ್ದ ದಂಪತಿಯ ಪೈಕಿ ಪತಿ ಸಾವಿಗೀಡಾಗಿದ್ದು, ಪತ್ನಿಯ ಪರಿಸ್ಥಿತಿ ಗಂಭೀರವಾಗಿದೆ. ತನ್ನ ಕಣ್ಮುಂದೆಯೇ ಪತಿ ಸಾವಿಗೀಡಾದ ಆಘಾತಕ್ಕೆ ಒಳಗಾಗಿರುವ ಸತಿ ಇದೀಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ರಾಯಚೂರು ನಗರದ ಕೃಷಿ ವಿಶ್ವವಿದ್ಯಾಲಯದ ಬಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಕಂದಾಯ ಇಲಾಖೆ ಸರ್ವೇಯರ್ ಎಸ್.ಎಸ್. ಪಾಟೀಲ್ (64) ಮೃತಪಟ್ಟಿದ್ದು, ಪತ್ನಿ ಲೇಪಾಕ್ಷಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಸಂಜೆ ಇಬ್ಬರೂ ಜೊತೆಯಾಗಿ ವಾಯುವಿಹಾರಕ್ಕೆ ಹೋಗಿದ್ದಾಗ ಹೀಗಾಗಿದೆ. ಇಬ್ಬರೂ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪತಿ ಸ್ಥಳದಲ್ಲೇ ಸಾವಿಗೀಡಾದರೆ, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಂಡಿದ್ದಾರೆ.