ಚಾಮರಾಜನಗರ: ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ವರದಿಯಾಗಿದೆ.
ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ಪರಶಿವಮೂರ್ತಿ(32) ಮೃತ ವ್ಯಕ್ತಿ. ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ವಿಪರೀತ ಟೀಕೆ, ಅಪಹಾಸ್ಯ ಮಾಡಿದ್ದಾಳೆ. ಪತ್ನಿಯ ಕಟು ಮಾತು, ವ್ಯಂಗ್ಯಗಳಿಂದ ತೀವ್ರ ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ಎರಡು ವರ್ಷದ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಪರಶಿವಮೂರ್ತಿ ಲಾರಿ ಚಾಲಕನಾಗಿದ್ದರು. ಮದುವೆ ಬಳಿಕ ಕೂದಲು ಸಂಪೂರ್ಣ ಉದುರಿತ್ತು. ಪತಿಯ ಬೋಳು ತಲೆಯನ್ನು ನೋಡಿದರೆ ನನಗೆ ಹೊರ ಹೋಗಲು ಕಷ್ಟವಾಗುತ್ತಿದೆ. ನಿಮ್ಮ ಜತೆ ಬಂದರೆ ಅನ್ಯರ ಮುಂದೆ ನನೆಗೆ ನಾಚಿಕೆಯಾಗುತ್ತೆಂದು ಮಮತಾ ಅಪಹಾಸ್ಯ ಮಾಡುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಎಸ್ಡಿಎಂಸಿ, ಮುಖ್ಯಶಿಕ್ಷಕರ ಕಿರುಕುಳ ತಪ್ಪಿಸಿ – ದೇವದುರ್ಗದಲ್ಲಿ ಬಿಇಒ ಕಚೇರಿ ಅಧಿಕಾರಿಗೆ ಬಿಸಿಯೂಟ ನೌಕರರ ಮನವಿ
ಸಾವಿಗೆ ಶರಣಾಗುವ ಮುನ್ನ ಡೆತ್ನೋಟ್ ಬರೆದಿಟ್ಟು ಪರಶಿವಮೂರ್ತಿ ಸಾವಿಗೀಡಾಗಿದ್ದಾರೆ. ಪತ್ರವನ್ನು ವಶಕ್ಕೆ ಪಡೆದ ಪೊಲೀಸರು, ಅದರಲ್ಲಿ ಆತ ಬರೆದಿರುವ ಕಾರಣವನ್ನು ನೋಡಿ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.