ಜಿಲ್ಲೆ

ಕನ್ನಡ ಮಾಧ್ಯಮ ಶಾಲೆಯಲ್ಲಿ ಸಿಗುತ್ತೆ ಮಾನವೀಯ ಮೌಲ್ಯ

ಇಂದಿರಾ ಎನ್ ಕೆ

ಹೆಬ್ರಿ: ಕಲಿತ ಶಾಲೆಗೆ ಕಿಂಚಿತ್ತಾದರೂ ಸಹಾಯ ವಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ವಾಧ್ಯಮ ಶಾಲೆಯಲ್ಲಿ ಸಿಗುವ ವಾನವೀಯ ಮೌಲ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಂಕ ಗಳಿಸುವ ಭರದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬೀಳಬೇಡಿ ಎಂದು ಹಳೇ ವಿದ್ಯಾರ್ಥಿ ಸಂತೋಷ್ ಪೂಜಾರಿ ನೆಕ್ಕಾರ್ ಬೆಟ್ಟು ಹೇಳಿದರು. ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಗೆ ಹಳೇ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳಿಗೆ 5 ಲಕ್ಷ ರೂ. ಚೆಕ್ ಮತ್ತು ಕ್ರೀಡಾ ಪರಿಕರಗಳ ಹಸ್ತಾಂತರಿಸಿ ವಾತನಾಡಿದರು. ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಅಶೋಕ ಕುವಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಾಲೆಗೆ ಧನ ಸಹಾಯ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಹಳೇ ವಿದ್ಯಾರ್ಥಿಗಳಾದ ಸಂತೋಷ್ ಪೂಜಾರಿ ನೆಕ್ಕಾರ್ ಬೆಟ್ಟು, ಶ್ರೀನಿವಾಸ ಉಪಾಧ್ಯಾಯ ಮುದ್ರಾಡಿ, ಸೌಮ್ಯ ಪ್ರಭು ಮುದ್ರಾಡಿ, ಅಶೋಕ ಪೂಜಾರಿ ಸಾಂತ್ರಪಲ್ಕೆ, ಶರತ್ ಶೆಟ್ಟಿ ಮುದ್ರಾಡಿ, ರಾವೇಂದ್ರ ಆಚಾರ್ಯ ಮುದ್ರಾಡಿ, ನವೀನ್ ಆಚಾರ್ಯ ಕೆಲಕಿಲ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ರುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕಿ ಶ್ಯಾಮಲಾ ನಿರೂಪಿಸಿದರು. ಶಿಕ್ಷಕರಾದ ಮಹೇಶ್ ನಾಯ್ಕ ಕೆ., ಪಿ.ವಿ.ಆನಂದ ಸಾಲಿಗ್ರಾಮ, ಚಂದ್ರಕಾಂತಿ ಹೆಗ್ಡೆ, ಮಹೇಶ ಎಂ. ಸಹಕರಿಸಿದರು.