ಜಿಲ್ಲೆ

ಕುಂದಾಪುರದಲ್ಲಿ ಬೃಹತ್ ಮಾನವ ಸರಪಳಿ ರಚನೆ

ಇಂದಿರಾ ಎನ್ ಕೆ

ಕುಂದಾಪುರ: ಪೌರಾಡಳಿ ನಿರ್ದೇಶನಾಲಯ , ಜಿಲ್ಲಾಡಳಿತ ನಗರಾಭಿವೃದ್ಧಿ ಕೋಶ, ಕುಂದಾಪುರ ಪುರಸಭೆ ಆಶ್ರಯದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದೊಂದಿಗೆ ವಾನವ ಸರಪಳಿ ಮತ್ತು ಸ್ವಚ್ಛತಾ ರ‌್ಯಾಲಿ, ಸ್ವಚ್ಛೋತ್ಸವ ಸ್ವಚ್ಛತಾ ಹೀ ಸೇವಾ- 2025 ನಗರದಲ್ಲಿ ಬುಧವಾರ ನಡೆಯಿತು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿಯಿಂದ ಆರಂಭವಾದ ರ‌್ಯಾಲಿ ಪಾರಿಜಾತ ಸರ್ಕಲ್ ಮೂಲಕ ಸಾಗಿ ಶಾಸಿ ವೃತ್ತದಲ್ಲಿ ಕೊನೆಗೊಂಡಿತು. ಬಳಿಕ ಮಾನವ ಸರಪಳಿ ನಿರ್ಮಾಣ ಹಾಗೂ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಪ್ರಭಾರ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ, ಪುರಸಭೆ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ಅಧಿಕಾರಿಗಳು, ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.