ಕಾರ್ಕಳ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸಿದ ಸಿ.ಎಸ್. ಇ.ಇ.ಟಿನಲ್ಲಿ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ 6 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಪ್ರಥಮ ವರ್ಷದ ಬಿಕಾಂ (ಪ್ರೊಫೆಷನಲ್) ವಿದ್ಯಾರ್ಥಿಗಳಾದ ವೈಷ್ಣವಿ, ಅಪೇಕ್ಷಾ ಎಲ್., ಸ್ನೇಹಾ ಡಿ.ಹೆಗ್ಡೆ, ಶಮ, ವಿನಿಷ ಮತ್ತು ದೀಪ್ತಿ ಬೇಂಗ್ರ ಅವರ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.