ಜಿಲ್ಲೆ

ಹಲವು ವಿಶೇಷತೆಗೆ ತೋಟಗಾರಿಕೆ ಮೇಳ ಸಾಕ್ಷಿ: ಗಮನ ಸೆಳೆದ ಬನಾನ ವೈನ್​

ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್​-ಐಐಎಚ್​ಆರ್​) ಹೆಸರಟ್ಟದ ಸಂಸ್ಥೆ ಆವರಣದಲ್ಲಿ ಆಯೋಜಿಸಿರುವ "ರಾಷ್ಟ್ರೀಯ ತೋಟಗಾರಿಕೆ ಮೇಳದ 2ನೇ ದಿನವಾದ ಶುಕ್ರವಾರ ಹಲವು ವಿಶೇಷತೆಗಳು ಗಮನ ಸೆಳೆದವು.

ಮೇಳದಲ್ಲಿ 250ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ.ತೋಟಗಾರಿಕೆ ಕ್ಷೇತ್ರದಲ್ಲಿ ನಡೆಸಲಾದ ಸಂಶೋಧನೆಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಐಐಎಚ್​ಆರ್​ ಅಭಿವೃದ್ಧಿಪಡಿಸಿರುವ ಹಣ್ಣಿನ ಬೆಳೆಗಳು, ಔಷಧೀಯ ಮತ್ತು ಸಂಶೋಧನಾ ಬೆಳೆಗಳನ್ನು ತಾಕುಗಳಲ್ಲಿ ಸಮೃದ್ಧವಾಗಿ ಬೆಳೆಸಲಾಗಿದೆ. ವಿಷಯಾಧಾರಿತವಾಗಿ ವಿಂಗಡಿಸಿದ ತಾಕುಗಳು, ಪ್ರತಿ ತಾಕುಗಳಿಗೆ ಜೋಡಿಸಿದ ನಾಮಲಕಗಳು ಬೆಳೆಗಳ ಕುರಿತು ರೈತರಿಗೆ ಮಾಹಿತಿ ಸಿಗುತ್ತಿತ್ತು.ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳ ಬಗ್ಗೆ ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕಲ್ಲಂಗಡಿ, ಸೋರೆಕಾಯಿ, ಮೆಣಸಿನಕಾಯಿ, ಬೆಣ್ಣೆಹಣ್ಣು, ರೋಸ್​ ಆ್ಯಪಲ್​, ಅಣಬೆ ಪುಷ್ಟೀಕರಣ ಸೇರಿ ನಾನಾ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಇದೆ. ಬಿತ್ತನೆ ಬೀಜ, ಹೂವು ಮತ್ತು ತರಕಾರಿ ಹಣ್ಣಿನ ತಳಿಗಳ ಸಸಿಗಳು, ಹಸಿರು ಮನೆ ಪರಿಕರಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಸಸ್ಯ ಪೋಷಕಾಂಶಗಳು, ಕೀಟನಾಶಕಗಳು, ನೀರಾವರಿ ವ್ಯವಸ್ಥೆ, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್​ ಪ್ರದರ್ಶನ ಇದೆ. ನಗರ ತೋಟಗಾರಿಕೆ, ಮಣ್ಣುರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ, ಪ್ಯಾಕೇಜ್​, ಸಂಗ್ರಹ ತಂತ್ರಜ್ಞಾನಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.ತಾಕುಗಳಲ್ಲಿ ಬೆಳೆಗಳಿಗೆ ಡ್ರೋನ್​ ಮೂಲಕ ಔಷಧ ಸಿಂಪಡಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಈ ವೇಳೆ ನೆರೆದಿದ್ದ ರೈತರು ಮಾಹಿತಿ ಪಡೆದರು. ಆನಂದ ಗುರೂಜಿ ಸೇರಿ ಹಲವರು ಐಐಎಚ್​ಆರ್​ ಅಭಿವೃದ್ಧಿ ಪಡಿಸಿದ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳನ್ನು ವೀಕ್ಷಿಸಿದರು.

ಬಿಸಿಲು ಲೆಕ್ಕಿಸದೆ ಮೇಳಕ್ಕೆ ಜನರು ಲಗ್ಗೆ

ರಾಜ್ಯದ ನಾನಾ ಭಾಗಗಳಿಂದ ರೈತರು, ರೈತ ಮಹಿಳೆಯರು, ಉದ್ಯಮಿಗಳು, ಶಾಲಾ&ಕಾಲೇಜು ಮಕ್ಕಳು ಸೇರಿ ಹಲವರು ತಂಡೋಪತಂಡವಾಗಿ ಆಗಮಿಸಿದ್ದರು. ಬಿಸಿಲನ್ನು ಲೆಕ್ಕಿಸದೆ ಕೆಲವರು ಟೋಪಿ ಹಾಕಿಕೊಂಡು, ಮತ್ತೆ ಕೆಲವರು ಛತ್ರಿಗಳನ್ನು ಹಿಡಿದು ಸುತ್ತಾಡುತ್ತಿದ್ದರು. ಮೇಳದಲ್ಲಿದ್ದ ಹೂವು, ತರಕಾರಿ, ಹಣ್ಣಿನ ಬೆಳೆಗಳ ತಾಕುಗಳನ್ನು ವೀಕ್ಷಿಸಿದರು. ಗಿಡಗಳಲ್ಲಿ ಬಿಟ್ಟಿರುವ ಹೂವು, ತರಕಾರಿ ಸಲು, "ಹೂವಿನ ಬೆಳೆ", "ತರಕಾರಿ, ಧಾನ್ಯಗಳು' ಸೇರಿ ಪ್ರಾತ್ಯಕಾ ತಾಕು ಮತ್ತು ಕೃಷಿ ಪ್ರಾತ್ಯಕೆಗಳನ್ನು ಕಂಡು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ಕೃಷಿಯಲ್ಲಿ ಇಷ್ಟೆಲ್ಲಾ ಆವಿಷ್ಕಾರಗಳಿವೆ ಎಂಬುದನ್ನು ಇವತ್ತೇ ತಿಳಿದಿದ್ದು ಎಂದು ವಿದ್ಯಾರ್ಥಿಗಳು ಆಶ್ಚಯಚಕಿತಗೊಂಡರು. ಅರ್ಕಾ ಸಿರೀಸ್​ನ ಹೊಸ ಹೊಸ ತಳಿಗಳನ್ನು ಒಂದೇ ಕಡೆ ನೋಡುವ ಅವಕಾಶ ಕಲ್ಪಿಸಿದ್ದರಿಂದ ಯಾವ ಬೆಳೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂಬುದನ್ನು ಕಂಡುಕೊಳ್ಳಲು ರೈತರಿಗೆ ನೆರವಾಗಿತ್ತು. ವಿಜ್ಞಾನಿಗಳು ಕೂಡ ಸ್ಥಳದಲ್ಲೇ ಇದ್ದು ಮಾಹಿತಿ ಕೇಳಿದವರಿಗೆ ಸ್ಥಳದಲ್ಲಿಯೇ ಉತ್ತರಿಸುತ್ತಿದ್ದರು.ಆಗಾಗ ಬರುತ್ತಿದ್ದ ಗಣ್ಯರು ಮೇಳಕ್ಕೆ ಮೆರಗು ನೀಡುತ್ತಿದ್ದರು.ಯಂತ್ರಗಳು, ಬೆಳೆಗಳು, ತಂತ್ರಜ್ಞಾನಗಳು, ಉತ್ಪನ್ನಗಳು ಒಂದಕ್ಕಿಂತ ಒಂದು ಬೆರಗು ಮೂಡಿಸುವಂತಿದ್ದವು.

ಬನಾನದಲ್ಲೂ ಬಂತು ವೈನ್​!

ದ್ರಾಕ್ಷಿ, ನೆಲ್ಲಿಕಾಯಿ, ದಾಳಿಂಬೆ ಮತ್ತಿತರ ಹಣ್ಣುಗಳಲ್ಲಿ ವೈನ್​ ಮಾಡಲಾಗುತ್ತಿತ್ತು. ಇದೀಗ ಬನಾನದಲ್ಲೂ ವೈನ್​ ಬಂದಿದ್ದು, ಇದು ನೋಡುಗರ ಗಮನ ಸೆಳೆಯುತ್ತಿದೆ. ಐಸಿಎಆರ್​&ನ್ಯಾಷನಲ್​ ರೀಸರ್ಚ್​ ಸೆಂಟರ್​ ಾರ್​ ಬನಾನ ಕೇಂದ್ರವು ಬಾಳೆಹಣ್ಣಿನ ವೈನ್​ ಅನ್ನು ಪ್ರದರ್ರ್ಶನಕ್ಕೆ ಇಟ್ಟಿದೆ. ತಮಿಳುನಾಡಿನ ಕೂರ್ರವಲ್ಲಿ, ಬಾಳೆಹಣ್ಣಿನಲ್ಲಿ ವೈನ್​ ತಯಾರಿಸಲಾಗುತ್ತಿದೆ. ಕರ್ಪೂರವಲ್ಲಿ ಹಣ್ಣು ತುಂಬ ಸಿಹಿ ಇದೆ. ಹೀಗಾಗಿ ಇದನ್ನು ಸಂಸ್ಕರಿಸಿ ವೈನ್​ಗೆ ಬಳಸಲಾಗುತ್ತಿದೆ. ಇದರಲ್ಲಿ ಶೇ.12&14 ಆಲ್ಕೋಹಾಲ್​ ಪ್ರಮಾಣವಿದ್ದು, ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಬಾಳೆಕಾಯಿ ರವೆ:

ಗೋಧಿ, ಅಕ್ಕಿ ರವೆಯಲ್ಲಿ ಉಪ್ಪಿಟ್ಟು ಮಾಡುವುದನ್ನು ಕೇಳಿದ್ದೇವೆ. ಆದರೆ.ಬಾಳೆಕಾಯಿ ರವೆಯಲ್ಲಿ ಉಪ್ಪಿಟ್ಟು ತಯಾರಿಸಲಾಗುತ್ತಿದೆ. ಕೇಸರಿಬಾತ್​ಗಾಗಿ ಪ್ರತ್ಯೇಕವಾಗಿ ಬಾಳೆಕಾಯಿ ಗ್ರಿಟ್ಸ್​ ತಯಾರಿಸಲಾಗಿದೆ. ತಿನ್ನಲು ರುಚಿಯಾಗಿದೆ. ಬಾಳೆದಿಂಡಿನಲ್ಲಿ ಜ್ಯೂಸ್​ ತಯಾರಿಸಲಾಗಿದೆ. ಇದು ಕಿಡ್ನಿ ಸಮಸ್ಯೆಯುಳ್ಳವರಿಗೆ ರಾಮಬಾಣವಾಗಿದೆ. ಶುಂಠಿ ಮಿಶ್ರಿತ ಬಾಳೆದಿಂಡಿನ ಜ್ಯೂಸ್​ನ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಬನಾನ ಪೌಡರ್​, ಪುಷ್ಟಿ ಬಾರ್​, ಸ್ಟಾರ್ಚ್​, ಉಪ್ಪಿನಕಾಯಿ, ಚಾಕೊಲೇಟ್​, ಯೋಗರ್ಟ್​, ಬಾಳೆಹೂವಿನ ಉಪ್ಪಿನಕಾಯಿ ಹೀಗೆ ಆರೋಗ್ಯಕರವಾದ ಹಲವು ಉತ್ಪನ್ನಗಳನ್ನು ತಿರುಚಿಯ ನ್ಯಾಷನಲ್​ ರೀಸರ್ಚ್​ ಸೆಂಟರ್​ ಾರ್​ ಬನಾನ ಕೇಂದ್ರವು ಆವಿಷ್ಕರಿಸಿದ್ದು, ಇವೆಲ್ಲವನ್ನೂ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. ಅಲ್ಲದೆ, ಕಾವೇರಿ ವಾಮನ್​, ಕಾವೇರಿ ಕಾಂಚನ್​ ನೂತನ ತಳಿಗಳು ಬಂದಿವೆ. ಚಿಪ್ಸ್​ಗಾಗಿ, ತಿನ್ನುವುದಕ್ಕಾಗಿ, ಪಲ್ಯ, ಸಾಂಬಾರ್​ಗೆ ಪ್ರತ್ಯೇಕ ಬಾಳೆಹಣ್ಣುಗಳಿವೆ. ರೋಬುಸ್ಟಾ, ಮಟ್ಟಿ ಹೀಗೆ ನಾನಾ ತಳಿಗಳು ಇಲ್ಲಿವೆ. ಈ ಪೈಕಿ ಪಿಸಾಂಗ್​ ಲಿಲಿನ (ಸೌತ್​ ಈಸ್ಟ್​ ಏಷ್ಯಾ)ದ ತಳಿಯ ಬಾಳೆ ವಿಶೇಷವಾಗಿದ್ದು, ಇದರಲ್ಲಿ ಸಕ್ಕರೆ ಅಂಶ ಕಡಿಮೆಯಿದ್ದು, ಮಧುಮೇಹಿಗಳು ಕೂಡ ಸೇವಿಸಬಹುದು. ಈ ಕೇಂದ್ರವು ಬರೋಬ್ಬರಿ 502 ತಳಿಗಳನ್ನು ಸಂಗ್ರಹಿಸಿದೆ.