ಜಿಲ್ಲೆ

ಸಿ.ಎ, ಸಿ.ಎಸ್ ಸಾಧಕ ವಿದ್ಯಾರ್ಥಿಗಳಿಗೆ ಗೌರವ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಸಿ.ಎ ಮತ್ತು ಸಿ.ಎಸ್ ಸಾಧಕ ವಿದ್ಯಾರ್ಥಿಗಳನ್ನು ಶುಕ್ರವಾರ ಗೌರವಿಸಲಾಯಿತು.

ಪ್ರಾಂಶುಪಾಲ ಡಾ. ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಶಿಕ್ಷಾಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್‌ನ ಸಹ ಸಂಸ್ಥಾಪಕ ಪ್ರತಾಪ ಚಂದ್ರ ಶೆಟ್ಟಿ ವಾತನಾಡಿದರು.

ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಸಿ.ಎ ಟಿ. ಸ್ವಸ್ಥಿಕ್ ಶೆಣೈ, ಸಿ.ಎ ವೈಷ್ಣವಿ ಮತ್ತು ಸಿ.ಎ ಭರತೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಾಣಿಜ್ಯ ವಿಭಾಗ ಮುಖ್ಯಸ್ಥ ಅರುಣ್ ಎ.ಎಸ್., ವಾಣಿಜ್ಯ ಸಂ ಸಂಯೋಜಕಿ ಮಮತಾ, ಉಪನ್ಯಾಸಕ ಸಂಯೋಜಕ ಸುವಾ ಮತ್ತು ರಿತಿನ್ ಎಸ್. ಉಪಸ್ಥಿತರಿದ್ದರು. ದ್ರುವ ಸ್ವಾಗತಿಸಿ, ಸುಜನ್ ವಂದಿಸಿದರು. ಭೂಮಿಕಾ ನಿರೂಪಿಸಿದರು.