ಜಿಲ್ಲೆ

ಪಿಎಚ್.ಡಿ ಪಡೆದ ಉಪನ್ಯಾಸಕಿಗೆ ಸನ್ಮಾನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಪ್ರಿಯಾಂಕಾ ಮಹೇಶ್ ಪಿಎಚ್.ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾಹೆಯಲ್ಲಿ ಡಾ.ನಿತಿನ್ ಕುಮಾರ್ ಎಸ್.ಶೆಟ್ಟಿ, ಡಾ.ಸುರೇಶ್ ಡಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಸಿಂಥೆಸಿಸ್ ಆಫ್ ನ್ಯೂ ಚಾಲ್ಕೋನ್ ಡಿರಾವೇಟಿವ್ಸ್ ಫೋಟೋಫಿಸಿಕಲ್ ಮತ್ತು ಮೆಟಲ್ ಯಿಯೋನ್ ಸೆನ್ಸಿಂಗ್ ಸ್ಟಡೀಸ್’ ಎಂಬ ಮಹಾಪ್ರಬಂಧಕ್ಕೆ ಉಪನ್ಯಾಸಕಿ ಪ್ರಿಯಾಂಕ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ ಎಂ.ರವಿ ರಾವ್, ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್, ಯೋಗೀಶ್ ಭಟ್, ಲಕ್ಷ್ಮಣ್ ಭಟ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಡಾ.ಭಾರ್ಗವಿ ಐತಾಳ್, ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.