ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕರ್ನಾಟಕ ರಾಜ್ಯ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮುದ್ರಾಡಿ ಮಂಜುನಾಥ ಪೂಜಾರಿ ದಂಪತಿಯನ್ನು ಕಬ್ಬಿನಾಲೆ ಗ್ರಾಮಸ್ಥರು ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಮುದ್ರಾಡಿಯಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಯೋಗೀಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾಪೋಳಿ ಶ್ರೀಧರ ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು. ಪಂಚಾಯಿತಿ ಮಾಜಿ ಸದಸ್ಯ ರಾಜೇಶ್ವರಿ ಹೆಬ್ಬಾರ್ ಮತ್ತು ಸವಿತಾ ಬಾಗಿನ ಸಮರ್ಪಿಸಿ ಆರತಿ ಬೆಳಗಿದರು.
ಮಂಜುನಾಥ ಪೂಜಾರಿ ಮಾತನಾಡಿ, ತಾನೆಂದೂ ಕೈ ಕೆಸರು ಮಾಡಿಕೊಳ್ಳದೆ 30 ವರ್ಷಗಳಿಂದ ಪಂಚಾಯಿತಿ, ತಾ.ಪಂ, ಜಿ.ಪಂ. ಪ್ರತಿನಿಧಿಯಾಗಿ ಪ್ರಾಮಾಣಿಕ ರಾಜಕೀಯ ಜೀವನ ನಡೆಸಿ ಹುಟ್ಟೂರ ಗ್ರಾಮಸ್ಥರ ಕಷ್ಟ ಸುಖಕ್ಕೆ ಸದಾ ಸ್ಪಂದಿಸಿದ ತೃಪ್ತಿ ಹೊಂದಿದ್ದೇನೆ. ಅಧ್ಯಕ್ಷನಾಗಿಯೂ ಅದೇ ಪ್ರಾಮಾಣಿಕತೆ ಮುಂದುವರಿಸುವೆ ಎಂದರು.
ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ನಿರೂಪಿಸಿದರು. ಪಂಚಾಯಿತಿ ಸದಸ್ಯ ಜಗದೀಶ್ ಪೂಜಾರಿ, ಮೋಹನ ಹೆಬ್ಬಾರ್, ಸುಬ್ರಹ್ಮಣ್ಯ ಕಂಗಿನಾಯ, ಅಚ್ಯುತ ಪೂಜಾರಿ, ಸದಾಶಿವ ಶೆಟ್ಟಿ, ಗುರುಪ್ರಸಾದ್ ಹೆಬ್ಬಾರ್, ಮಮತಾ ಶೆಟ್ಟಿ, ರಾಜೇಶ್ವರಿ ಹೆಬ್ಬಾರ್, ಸವಿತಾ, ಪ್ರವೀಣ್, ದೋಗು ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ ಪ್ರಭಾಕರ ಕುಲಾಲ್ ಮೊದಲಾದವರಿದ್ದರು.