ಗೋಳಿಯಂಗಡಿ ಶ್ರೀ ಸದಾಶಿವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ ಚಿನ್ನದ ಪದಕ ವಿಜೇತೆ ಪ್ರಿಯಾಂಕಾ ಯಳಂತೂರು, ವಿಜ್ಞಾನ ಮಾದರಿ ಅವಿಷ್ಕಾರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ವಿಜೇಂದ್ರ ನಾಯ್ಕ ಗೋಳಿಯಂಗಡಿ, ಸ್ಥಳೀಯ ಉದ್ಯಮಿ ಚಂದ್ರ ನಾಯ್ಕ ತೊಂಬತ್ತು ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಧಾರ್ಮಿಕ ಆಚರಣೆಯಿಂದ ಬಾಂಧವ್ಯ ವೃದ್ಧಿ

ಇಂದಿರಾ ಎನ್ ಕೆ

ಗೋಳಿಯಂಗಡಿ: ಧಾರ್ಮಿಕ ಆಚರಣೆಗಳು ಜನರಲ್ಲಿ ಒಗ್ಗಟ್ಟು, ಶಾಂತಿ, ಸಾಮರಸ್ಯ, ಐಕ್ಯತೆ, ಬಾಂಧವ್ಯ ವೃದ್ಧಿಸುತ್ತವೆ ಎಂದು ಗೋಳಿಯಂಗಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಗಣೇಶ್ ಕಿಣಿ ಬೆಳ್ವೆ ಹೇಳಿದರು.

ಗೋಳಿಯಂಗಡಿ ಪ್ರಜ್ಞಾ ಯುವಕ ಮಂಡಲ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಗೋಳಿಯಂಗಡಿ ಶ್ರೀಸದಾಶಿವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರಿ ೀಗಣೇಶೋತ್ಸವದ ಪ್ರಯುಕ್ತ ಇತ್ತೀಚೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಎಚ್.ಪ್ರಮೋದ್ ಹೆಗ್ಡೆ ಹಿಲಿಯಾಣ, ಸುಬ್ರಹ್ಮಣ್ಯ ಭಟ್ ಹಿಲಿಯಾಣ, ಭಾರ್ಗವಿ ಪಿ.ಭಟ್ ಗೋಳಿಯಂಗಡಿ, ಸುರೇಂದ್ರ ನಾಯ್ಕ ಯಳಂತೂರು, ಕಾಳು ನಾಯ್ಕ ಎಲ್ಸೆಮನೆ, ನಾರಾಯಣ ನಾಯ್ಕ ಯಳಂತೂರು, ಚಂದ್ರ ಆಚಾರ್ಯ ಗೋಳಿಯಂಡಿ, ಚಂದ್ರ ನಾಯ್ಕ ಕಲ್ಗುಂಡಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ ಚಿನ್ನದ ಪಕ ವಿಜೇತೆ ಪ್ರಿಯಾಂಕಾ ಯಳಂತೂರು, ವಿಜ್ಞಾನ ಮಾದರಿ ಆವಿಷ್ಕಾರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ವಿಜೇಂದ್ರ ನಾಯ್ಕ ಗೋಳಿಯಂಗಡಿ, ಸ್ಥಳೀಯ ಉದ್ಯಮಿ ಚಂದ್ರ ನಾಯ್ಕ ತೊಂಬತ್ತು ಅವರನ್ನು ಸನ್ಮಾನಿಸಲಾಯಿತು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.