ಬಂಟಕಲ್ಲು ಬಸ್ ನಿಲ್ದಾಣದ ಗ್ರಂಥಾಲಯಕ್ಕೆ ಕಸಾಪದಿಂದ ಪುಸ್ತಕ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು 
ಜಿಲ್ಲೆ

ನೂರು ದಿನಗಳಲ್ಲಿ ಶತ ಗ್ರಂಥಾಲಯ : ಉಡುಪಿ ಕಸಾಪ ಅಧ್ಯಕ್ಷ ರವಿರಾಜ್ ಭರವಸೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಶಿರ್ವ

ತಾಲೂಕಿನ ಸಾರ್ವಜನಿಕ ಸ್ಥಳಗಳಲ್ಲಿ 65 ಗ್ರಂಥಾಲಯಗಳ ಮನೆ, ಅಂಗಡಿ, ಆಸ್ಪತ್ರೆ ನಿರ್ಮಾಣಗೊಂಡಿದೆ. 100 ದಿನಗಳಲ್ಲಿ ನೂರು ಗ್ರಂಥಾಲಯ ನಿರ್ಮಾಣಗೊಳ್ಳುವ ಆಶಯ ಹೊಂದಿದ್ದು, ಕಾಪು ಕಸಾಪ ಘಟಕವೂ ಈ ಅಭಿಯಾನದಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದೆ ಎಂದು ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಪಿ.ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಹಾಗೂ ಕಾಪು ತಾಲೂಕುಗಳ ಘಟಕ ವತಿಯಿಂದ ಮನೆಯೇ ಗ್ರಾಂಥಾಲಯ ಅಭಿಯಾನ ಅಂಗವಾಗಿ ಬುಧವಾರ ನಾಗರಿಕ ಸೇವಾ ಸಮಿತಿ ವತಿಯಿಂದ ಬಂಟಕಲ್ಲು ಬಸ್ ನಿಲ್ದಾಣದ ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶುಭಹಾರೈಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪುಸ್ತಕಗಳನ್ನು ಸ್ವೀಕರಿಸಿದರು. ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೋಶಾಧಿಕಾರಿ ಜಗದೀಶ ಆಚಾರ್ಯ, ವೈಲೆಟ್ ಕ್ಯಾಸ್ತಲಿನೊ, ವಿನ್ಸೆಂಟ್ ಪಲ್ಕೆ, ಉಮೇಶ್ ರಾವ್, ಡೆನೀಸ್ ಡಿಸೋಜ, ವೀರೇಂದ್ರ ಪಾಟ್ಕರ್, ವಿಶ್ವನಾಥ್, ಅಶೋಕ್, ಹರೀಶ್, ಸುನೀಲ್, ಉಡುಪಿ ಕಸಾಪ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜನಿ ವಸಂತ್, ಸಂಚಾಲಕ ರಾಘವೇಂದ್ರ ಪ್ರಭು, ದೀಪಾ ಚಂದ್ರಕಾಂತ್ ಉಪಸ್ಥಿತರಿದ್ದರು.