ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಪಾದರಾಯನಪುರ ಮತ್ತು ಬಾಪೂಜಿನಗರದಲ್ಲಿ ಸೀಲ್ಡೌನ್ ಹೇರಿದ್ದರೂ ಜನ ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅನವಶ್ಯಕವಾಗಿ ರಸ್ತೆಗೆ ಇಳಿದು ಮತ್ತಷ್ಟು ಕರೊನಾ ಆತಂಕ ಹೆಚ್ಚಿಸುತ್ತಿದ್ದಾರೆ.
ಭಾನುವಾರ (ಏ.12) ಮಧ್ಯಾಹ್ನ ಜೆ.ಜೆ. ನಗರದ ಕನಕನಗರದಲ್ಲಿ ಹೋಂ ಕ್ವಾರಂಟೈನ್ಗೆ ಒಳಪಟ್ಟಿದ್ದ ಕರೊನಾ ಸೋಂಕು ಶಂಕಿತ ವ್ಯಕ್ತಿಯೊಬ್ಬ ಹೊರಗಡೆ ಓಡಾಡಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹೋಂ ಕ್ವಾರಂಟೈನ್ ಎನ್ಫೋರ್ಸ್ವೆುಂಟ್ ದಳದ ಸಿಬ್ಬಂದಿ ಕರೆಸಿ ಸೋಂಕು ಶಂಕಿತನನ್ನು ವಶಕ್ಕೆ ಪಡೆದು ಆಂಬುಲೆನ್ಸ್ ಮೂಲಕ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿ ಕ್ಯಾಮರಾಗಳಿಂದ ನಿಗಾ: ಸೀಲ್ಡೌನ್ ನಡುವೆಯೂ ಜನರು ಅನವಶ್ಯಕವಾಗಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅಂತವರ ಮೇಲೆ ನಿಗಾವಹಿಸಲು ಪೊಲೀಸರು ಸಿಸಿ ಕ್ಯಾಮರಾ ಮೊರೆ ಹೋಗಿದ್ದಾರೆ. ಪಾದರಾಯನಪುರ ಮತ್ತು ಬಾಪೂಜಿನಗರದ ಪ್ರಮುಖ ರಸ್ತೆಗಳಲ್ಲಿ ಕೆಲವೆಡೆ ಸಿಸಿ ಕ್ಯಾಮರಾ ಅಳಡಿಸಿ ಕಣ್ಣಿಟ್ಟಿದ್ದಾರೆ. ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಆಧರಿಸಿ ಅನವಶ್ಯಕವಾಗಿ ಓಡಾಡುವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಒಟ್ಟು 31 ವಿದೇಶಿಗರು: ಇಂಡೋನೇಷ್ಯಾ, ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನ್ ದೇಶದ 31 ಪ್ರಜೆಗಳು ಮಾರ್ಚ್ನಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರು ಸೇರಿ ದೇಶದ ವಿವಿಧೆಡೆ ನಡೆದ ತಬ್ಲಿಘಿ ಧಾರ್ವಿುಕ ಪ್ರಚಾರದಲ್ಲಿ ಪಾಲ್ಗೊಂಡು ಪಾದರಾಯನಪುರದ ಸುಬಾನಿಯ ಮಸೀದಿಗೆ ಬಂದು ನೆಲೆಸಿರುವುದು ಬಯಲಾಗಿದೆ. ಇವರನ್ನು ಮಸೀದಿಗೆ ಬಂದು ಹೋಗಿರುವ ಜನರು ಸಂರ್ಪಸಿರುವ ಸಾಧ್ಯತೆ ಇದ್ದು, ಕರೊನಾ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.