ಕೋಟ: ಶಿಬಿರಗಳು ಅರ್ಥಪೂರ್ಣವಾಗಬೇಕು ಅದು ಕೇವಲ ದೈಹಿಕವಲ್ಲದೆ ಮನೋವಿಕಾಸಕ್ಕೆ ನಾಂದಿಯಾಗಬೇಕು. ಶಿಕ್ಷಣದ ಮೂಲಕ ಮಕ್ಕಳಲ್ಲಿ ನೈಜ ಸಂಸ್ಕಾರ ನೀಡಿದರೆ ಮುಂದಿನ ಜನಾಂಗಕ್ಕೆ ಅದರ ಫಲ ದೊರಕುತ್ತದೆ ಎಂದು ಶ್ರೀ ರಾಮಾಮೃತ ಭಜನಾ ಸಂಘ ಕೋಟ ಮುಖ್ಯಸ್ಥ ಪ್ರವೀಣ್ ಕುಂದರ್ ಹೇಳಿದರು.
ಕೋಟದ ಸೇವಾಸಂಗಮ ಶಿಶು ಮಂದಿರಲ್ಲಿ ರಜಾ ಸಂಸ್ಕಾರ ಶಿಬಿರದಲ್ಲಿ ಮಾತನಾಡಿದರು. ಧಾರ್ಮಿಕ, ಸಾಂಸ್ಕೃತಿಕ, ಮನೋವಿಕಾಸಕ್ಕೆ ಬೇಕಾದ ಮಾಹಿತಿ ಮಕ್ಕಳಿಗೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣತಜ್ಞ ಸಂಜೀವ ಗುಂಡ್ಮಿ, ಅಂಗನವಾಡಿ ಶಿಕ್ಷಕಿಯರಾದ ಯಮುನಾ ಕುಂದರ್, ಜಯಲಕ್ಷ್ಮೀ, ಪ್ರಜ್ಞಾ, ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಪೂಜಾ ಭಟ್, ಪ್ರಕಾಶ್ ಭಟ್, ಪ್ರವೀಣ್ ಕುಂದರ್ ಭಾಗಿಯಾಗಿದ್ದರು.
ಸಮಾರೋಪದಲ್ಲಿ ಕೋಟ ಸೇವಾಸಂಗಮ ಶಿಶುಮಂದಿರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಉಪಾಧ್ಯಕ್ಷೆ ಗೀತಾ ಎ.ಕುಂದರ್, ಸಮಿತಿ ಸದಸ್ಯರಾದ ಸಂತೋಷ್ ಪ್ರಭು, ಪ್ರಮೀಳಾ, ರವೀಂದ್ರ ಕೋಟ, ಮಾತಾಜಿ ಸಂಗೀತ, ಹಿಂದಿನ ಮಾತಾಜಿ ದೀಪಾ ಎಸ್.ಆಚಾರ್, ಸಹಾಯಕಿ ಜ್ಯೋತಿ, ಶಿಬಿರಾರ್ಥಿ ಚಿನ್ಮಯಿ ಹೊಳ್ಳ ಉಪಸ್ಥಿತರಿದ್ದರು. ಶಿಶು ಮಂದಿರ ಕಾರ್ಯದರ್ಶಿ ಸುಷ್ಮಾ ದಯಾನಂದ್ ವಂದಿಸಿದರು. ವ್ಯವಸ್ಥಾಪಕಿ ಭಾಗ್ಯವಾದಿ ರಾಜ್ ನಿರೂಪಿಸಿದರು.