ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕ, ರೆಡ್ ರಿಬ್ಬನ್ ಘಟಕ, ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ, ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಸಹಯೋಗದಲ್ಲಿ ಎಚ್‌ಐವಿ ತಡೆಗಟ್ಟುವ ಕ್ರಮ ಮತ್ತು ಯುವಕರಲ್ಲಿ ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಗಿ ವಸಂತಿ, ಐಸಿಟಿಸಿ ಸಮಾಲೋಚಕಿ ವಸಂತಿ, ಎನ್‌ಸಿಡಿ ಸಿಬ್ಬಂದಿ ನಾಗರಾಜ, ಪ್ರಾಂಶುಪಾಲ ನಾಗರಾಜ ಶೆಟ್ಟಿ, ಐಕ್ಯೂಎಸಿ ಘಟಕದ ಸಹಸಂಚಾಲಕಿ ಸವಿತಾ ಎಸ್, ರೆಡ್‌ಕ್ರಾಸ್ ಸಂಚಾಲಕ ಶಿವಕುಮಾರ ಪಿ. ವಿ., ಎನ್‌ಎಸ್‌ಎಸ್ ಸಂಚಾಲಕ ನವೀನ್ ಎಚ್. ಜೆ ಹಾಗೂ ಉಪನ್ಯಾಸಕರು ಇದ್ದರು.