ಜಿಲ್ಲೆ

ಹೃದಯಾಘಾತಕ್ಕೊಳಗಾಗಿ ಮಂಡ್ಯ ಮೂಲದ ಯುವನಟ ಮೃತ್ಯು

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಸಾವಿನ ನೋವು ಮಾಸುವ ಮುನ್ನವೇ ಕಿರುತೆರೆ ನಟರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹಿಂದಿ ಮತ್ತು ತಮಿಳು ಸೀರಿಯಲ್​ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದ ನಿವಾಸಿ ಪವನ್​ ಸಿಂಗ್​(25) ಆಗಸ್ಟ್​ 18ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಕೆ.ಆರ್​. ಪೇಟೆ ಮೂಲದವರಾದ ಪವನ್​ ತಮ್ಮ ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಬೆಳ್ಳಿ ಪರದೆ ಮೇಲೆ ಮಿಂಚಬೇಕು ಎಂಬ ಹಂಬಲದೊಂದಿಗೆ ಪವನ್​ ಸಿನಿಮಾ ರಂಗವನ್ನು ಪ್ರವೇಶಿಸಿದ್ದರು. ಆದರೆ, ಬೆಳ್ಳಿ ಪರದೆ ಮೇಲೆ ಖ್ಯಾತಿ ಗಳಿಸುವ ಮುನ್ನವೇ ಕ್ರೂರ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ ಅವರ ಮೃತದೇಹವನ್ನು ಮುಂಬೈನಿಂದ ಅವರ ಹುಟ್ಟೂರಿಗೆ ತರಲಾಗಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಿ-ವಿಧಾನಗಳು ನೆರವೇರಿಸಲಾಗಿದೆ.