ಮೂಲ್ಕಿ: ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಯನ್ನು ಗುರುತಿಸಿ ಅತಿ ಸರಳವಾಗಿ ದೊಡ್ಡ ಮೊತ್ತದ ಸಹಾಯ ನೀಡುವ ರಾಮಕೃಷ್ಣ ಪೂಂಜ ಚಾರಿಟೆಬಲ್ ಟ್ರಸ್ಟ್ ಕಾರ್ಯ ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಹೇಳಿದರು.
ಮೂಲ್ಕಿ ಕಾರ್ನಾಡಿನಲ್ಲಿ ಮೂಲ್ಕಿ ರಾಮಕೃಷ್ಣ ಪೂಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಸಹಾಯಕರಿಗೆ ಸಹಾಯಹಸ್ತ ನೀಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೀನ ದುರ್ಬಲರ ಆರೋಗ್ಯ ಹಾಗೂ ಶೈಕ್ಷಣಿಕ ಏಳಿಗೆಗೆ ರಾಮಕೃಷ್ಣ ಪೂಂಜ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ರಮ ಸಮಾಜಕ್ಕೆ ಮಾದರಿ ಎಂದರು.
ಬಳಿಕ ಸುಮಾರು 13 ಲಕ್ಷ ರೂ.ವೆಚ್ಚದಲ್ಲಿ 170 ಮಂದಿಗೆ ಶೈಕ್ಷಣಿಕ ಸಹಾಯಹಸ್ತ, ವೈದ್ಯಕೀಯ ಹಾಗೂ ಮಾನವೀಯ ನೆರವು ನೀಡಲಾಯಿತು. ಪೂಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಪೂಂಜ ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯರಾದ ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಾಮಚಂದ್ರ ನಾಯಕ್ ಕೋಲ್ನಾಡುಗುತ್ತು, ಡಾ.ವಾಸುದೇವ ಬೆಳ್ಳೆ, ಪೂಂಜ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಆದಿತ್ಯ ಪೂಂಜ, ನಿರ್ದೇಶಕರಾದ ವಿನೋದ್ ಸಾಲ್ಯಾನ್, ಶರತ್ ಶೆಟ್ಟಿ ಸಂಕಲಕರಿಯ, ಉದಯ್ ಕುಮಾರ್ ಶೆಟ್ಟಿ ಅಧಿಧನ್, ಶಶೀಂದ್ರ ಸಾಲ್ಯಾನ್, ಅಶೋಕ್ ಚಿತ್ರಾಪು, ನಿವೃತ್ತ ಉಪನ್ಯಾಸಕ ವೈ.ಎನ್.ಸಾಲ್ಯಾನ್, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಪೂಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಪೂಂಜ ಸ್ವಾಗತಿಸಿದರು. ವೈ.ಎನ್.ಸಾಲ್ಯಾನ್ ನಿರೂಪಿಸಿದರು.