ಮುಡಾಯಿಬೆಟ್ಟಿನಲ್ಲಿ ಕೆಸರ್ದ ಕಂಡೊಡು ಕುಲಾಲೆರೆನ ಕುಸಲ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಅವರನ್ನು ಗೌರವಿಸಲಾಯಿತು 
ಜಿಲ್ಲೆ

ಸಮಾಜದಲ್ಲಿ ಅಸಹಾಯಕರಿಗೆ ನೆರವಾಗಬೇಕು : ಗೋಪಾಲ ಕುಲಾಲ್

ಇಂದಿರಾ ಎನ್ ಕೆ

ಹೆಬ್ರಿ: ಕುಲಾಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಮತ್ತು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್ ಹೇಳಿದರು.

ಕೆರ್ವಾಶೆ ಕುಲಾಲ ಸಂಘ ಮತ್ತು ಕುಲಾಲ ಮಹಿಳಾ ಸಂಘ ವತಿಯಿಂದ ಮುಡಾಯಿಬೆಟ್ಟಿನಲ್ಲಿ ಭಾನುವಾರ ಕೆಸರ್ದ ಕಂಡೊಡು ಕುಲಾಲೆರೆನ ಕುಸಲ್ದ ಗೊಬ್ಬುಲು ಉದ್ಘಾಟಿಸಿ ಮಾತನಾಡಿದರು.

ಕೆರ್ವಾಶೆ ಕುಲಾಲ ಸಂಘ ಅಧ್ಯಕ್ಷ ಸುಧೀರ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮುಡಾಯಿಬೆಟ್ಟು ಸುಂದರ ಮೂಲ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಚ್ಚೋಡಿ, ಕುಲಾಲ ಮಹಿಳಾ ಸಂಘ ಅಧ್ಯಕ್ಷೆ ವಿಮಲಾ ಜಯ ಮೂಲ್ಯ, ಕುಲಾಲ ಸಂಘ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳು ನಡೆಯಿತು. ಆಟಿ ತಿಂಗಳ ವಿಶೇಷ ತಿನಿಸುಗಳ ಪ್ರದರ್ಶನ ನಡೆಯಿತು.

ಸಮಾರೋಪ

ಸಮಾರೋಪದಲ್ಲಿ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಉಪಾಧ್ಯಕ್ಷ ಶಂಕರ ಕುಲಾಲ್, ಉಪನ್ಯಾಸಕ ಬೆಳ್ಳಿಬೆಟ್ಟು ದೇವಿ ಪ್ರಸಾದ್, ಕಾರ್ಕಳ ಜೋಡುರಸ್ತೆ ಕುಂಭಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೃದಯ ಕುಲಾಲ್ ಉಪಸ್ಥಿತರಿದ್ದರು.