ಬೆಂಗಳೂರು: ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿಗಳು ಪ್ರಾಜೆಕ್ಟ್ ಅನ್ನದಾನದ ಬ್ಯಾನರ್ ಅಡಿ 45 ವಲಸೆ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ.
ಬೆಲ್ಲಹಳ್ಳಿ ಬಂಡೆಯಲ್ಲಿ ಡ್ರಮ್ ತಯಾರಿಸುವ ಉತ್ತರ ಪ್ರದೇಶ ಮೂಲದ 45 ವಲಸೆ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಕಂಡು ಅನಘಾ ಸಜನ್, ರಿಂಗ್ಚಾಮ್ಸುಯಿಲಿಯು ಪಮೇ, ಮೈಟಾಂಗ್ಕೈಶಾಂಗ್ಬಮ್ ರೀಯಾ ದೇವಿ, ಎಸ್.ರೂಪಶ್ರೀ, ಡೇರಿಸ್ ರಾಬಿನ್ ನೇತೃತ್ವದ ವಿದ್ಯಾರ್ಥಿಗಳು, ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಬ್ಬನ್ ಪಾರ್ಕ್ ಮತ್ತು ಚರ್ಚ್ ಸ್ಟ್ರೀಟ್ನ ಬೀದಿಗಳಲ್ಲಿ ಕ್ರೌಡ್ಫಂಡ್ ಸಂಗ್ರಹಿಸಿ ವಲಸೆ ಕುಟುಂಬಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದಾರೆ.