ಹೆಬ್ರಿ: ಪಿಆರ್‌ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸಂಸ್ಥೆ ಅನ್ನಪೂರ್ಣ ಸಭಾಂಗಣದಲ್ಲಿ ಆಚರಿಸಲಾಯಿತು.
ಸಂಸ್ಥೆ ಸಂಸ್ಕೃತ ಶಿಕ್ಷಕ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆ ನೆರವೇರಿಸಿದರು. ಮಾತೆಯರು ಭಜನೆ, ಕುಣಿತ ಭಜನೆ ನೆರವೇರಿಸಿದರು. ಸಂಸ್ಥೆ ಆಡಳಿತ ಮಂಡಳಿ ಸತೀಶ್ ಪೈ, ಶೈಲೇಶ್ ಕಿಣಿ, ಗುರುದಾಸ್ ಶೆಣೈ , ಮಾತೃ ಮಂಡಳಿ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕಿ ಮೀನಾಕ್ಷಿ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಕುಮಾರ್, ಅಪರ್ಣಾ ಆಚಾರ್, ಅನಿತಾ, ಶಕುಂತಳಾ, ಮೇಲ್ವಿಚಾರಕ ರಾಘವೇಂದ್ರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.