ಹೆಬ್ರಿ: ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುವರ್ಣ ಸಂಭ್ರಮದ ಹಿನ್ನೆಲೆ ಹೆಬ್ರಿ ಸುಧಿ ಆರ್ಟ್ಸ್‌ನ ಸುಧೀಪ್ ಭಟ್ ರಚಿಸಿದ ಲೋಗೋವನ್ನು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಳದ ಆನುವಂಶಿಕ ಮೊಕ್ತೇಸರ ತಾರನಾಥ ಬಲ್ಲಾಳ್ ರಾಮಮಂದಿರಲ್ಲಿ ಬುಧವಾರ ಅನಾವರಣಗೊಳಿಸಿದರು.
ಸಮಿತಿ ಅಧ್ಯಕ್ಷ ಜನಾರ್ಧನ ಎಚ್., ಉಪಾಧ್ಯಕ್ಷ ಎಚ್.ಕೆ.ಸುಧಾಕರ, ದಿವಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಮಠದಬೆಟ್ಟು, ಸಮಿತಿ ಪೋಷಕರಾದ ಎಂ.ಯೋಗೀಶ್ ಭಟ್, ಬಾಲಕೃಷ್ಣ ನಾಯಕ್, ಸುಧೀರ್ ನಾಯಕ್, ಪ್ರವೀಣ್ ಬಲ್ಲಾಳ್, ಮಹಿಳಾ ಸಮಿತಿಯ ಬಾನು ಪಿ.ಬಲ್ಲಾಳ್, ಪ್ರಮುಖರಾದ ರಾಮಕೃಷ್ಣ ಆಚಾರ್ಯ, ಡಾ.ವಿದ್ಯಾಧರ ಹೆಗ್ಡೆ, ವಸಂತ ಶೆಟ್ಟಿ, ಶಂಕರ್ ಶೇರಿಗಾರ್, ಉಮೇಶ್ ನಾಯಕ್, ವಿಜೇಂದ್ರ ಶೆಟ್ಟಿ, ನಾಗರತ್ನಾ, ಶಾಲಿನಿ ಎಸ್.ಭಂಡಾರಿ, ಸುದೀಪ್ ಭಟ್, ಸಂತೋಷ್ ನಾಯಕ್, ನಾಗರಾಜ, ತಿಪ್ಪೇಸ್ವಾಮಿ ಇದ್ದರು. ಟಿ.ಜಿ.ಆಚಾರ್ಯ ನಿರೂಪಿಸಿದರು. ಪ್ರಸಾದ್ ಶೆಟ್ಟಿ ವಂದಿಸಿದರು.