ಬೆಂಗಳೂರು: ಬಿಸಿಲಿನ ತಾಪಕ್ಕೆ ಬಳಲಿದ್ದ ಬೆಂಗಳೂರಿನಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆಯೇ ಧಾರಾಕಾರ ಮಳೆ ಸುರಿದಿದೆ. ಗುಡುಗು ಮಿಂಚು, ಸಿಡಿಲಿನ ಆರ್ಭಟವೂ ಇತ್ತು. ಮಹಾನಗರದ ಶ್ರೀನಗರ, ಚಾಮರಾಜಪೇಟೆ ಮತ್ತು ವಿವಿಧೆಡೆ ಮಳೆ ಸುರಿದಿದ್ದು ಭೂಮಿ ತಂಪಾಗಿದೆ.
ಗುರುವಾರ ರಾತ್ರಿಯೂ ಹಲವೆಡೆ ಮಳೆ ಸುರಿದಿದೆ. ಮಳೆಗಾಲದ ಮಳೆಯನ್ನು ನೆನಪಿಸುವಂತೆ ಮಳೆ ಸುರಿಯುತ್ತಿದ್ದು, ಬೆಳಗ್ಗೆ ತರಕಾರಿ, ಹಾಲು ಮುಂತಾದ ಅಗತ್ಯ ವಸ್ತು ಖರೀದಿಗೆ ಮನೆಯಿಂದ ಹೊರಬಂದವರು ಅಂಗಡಿ, ಮಳಿಗೆಗಳ ಛಾವಣಿಯನ್ನು ಆಶ್ರಯಿಸಿದ್ದಾರೆ. ಮಳೆಯಿಂದ ಆಗಿರುವ ನಾಶ ನಷ್ಟಗಳ ಕುರಿತು ಇನ್ನೂ ಮಾಹಿತಿ ಲಭ್ಯವಿಲ್ಲ.