ಬುಧವಾರ ಬೀಸಿದ ಗಾಳಿ ಹಾಗೂ ಭಾರಿ ಮಳೆಗೆ ಕುರ್ಪಾಡಿಯ ಜಗದೀಶ್ ಎಂಬುವರ ಮನೆಯ ಮೆಲೆ ಬೃಹತ್ ಗಾತ್ರದ ಹುಣಸೆ ಮರ ಬಿದ್ದು ಅಪಾರ ಹಾನಿಯಾಗಿದೆ 
ಜಿಲ್ಲೆ

ಭಾರಿ ಗಾಳಿಮಳೆಗೆ ಕುರ್ಪಾಡಿಯಲ್ಲಿ 36 ಮನೆಗಳಿಗೆ ಹಾನಿ

ಕೊಕ್ಕರ್ಣೆ: ಕರ್ಜೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಪಾಡಿ ಎಂಬಲ್ಲಿ ಬುಧವಾರ ಉಂಟಾದ ಭಾರಿ ಗಾಳಿ ಹಾಗೂ ಮಳೆಗೆ 36 ಮನೆಗಳು ಸಹಿತ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಸ್ಥಳಕ್ಕೆ ಕಂದಾಯ ಇಲಾಖೆ, ಮೆಸ್ಕಾಂ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು, ಶೌರ್ಯ ಘಟಕ ಚೇರ್ಕಾಡಿ ಇದರ ಸದಸ್ಯರು ಆಗಮಿಸಿ ಮರಗಳ ತೆರವು ಕಾರ್ಯ ನಡೆಯಿತು.