ಜಿಲ್ಲೆ

ಮಳೆಯಿಂದ ಈ ಇಲಾಖೆಗೆ 5.55 ಕೋಟಿ ರೂ. ನಷ್ಟ

Uttara Kannada - Subash Hegde

ಕಾರವಾರ:ಮಳೆಗಾಲ ಎಂದರೆ ಜಿಲ್ಲೆಯ ಹೆಸ್ಕಾಂಗೆ ಕಂಠಕ, ನಷ್ಟ. ಪ್ರತಿ ಬಾರಿ ಮಳೆಗಾಲದಲ್ಲಿ ವಿದ್ಯುತ್‌ ಕಂಬಗಳ ಮೇಲೆ ಮರ ಬಿದ್ದು, ಕೋಟ್ಯಂತರ ರೂ.ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಹೆಸ್ಕಾಂ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ.

ಮಳೆಯಿಂದ ಜಿಲ್ಲೆಯ ಹೆಸ್ಕಾಂಗೆ ಭಾರಿ ನಷ್ಟವಾಗಿದೆ. ಜೂನ್1 ರಿಂದ ಇದುವರೆಗೆ 5.55 ಕೋಟಿ ರೂ. ನಷ್ಟವಾಗಿದೆ ಎಂದು ಹೆಸ್ಕಾಂ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಶಿರಸಿ ವಿಭಾಗದಲ್ಲಿ ಅತಿ ಹೆಚ್ಚು ಎಂದರೆ 2.24 ಕೋಟಿ.ಹೊನ್ನಾವರ ವಿಭಾಗದಲ್ಲಿ 2.11 ಕೋಟಿ ರೂ. ನಷ್ಟವಾಗಿದೆ. ಕಾರವಾರ ವಿಭಾಗದಲ್ಲಿ 84.80 ಲಕ್ಷ ರೂ., ದಾಂಡೇಲಿ ವಿಭಾಗದಲ್ಲಿ 33.82 ಲಕ್ಷ ರೂ. ಹಾನಿಯಾಗಿದೆ ಎಂದು ಹೆಸ್ಕಾಂ ವರದಿ ನೀಡಿದೆ.

ಇದನ್ನೂ ಓದಿ:ಆ.10 ರಿಂದ ಎಸ್ಕಾಂ, ಕೆಪಿಟಿಸಿಎಲ್ ಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಮಳೆಯಿಂದ 3539 ಕಂಬಗಳು ಬಿದ್ದಿದ್ದು, ಪ್ರತಿ ಕಂಬಕ್ಕೆ 4 ಸಾವಿರದಂತೆ ಒಟ್ಟು 1.41 ಕೋಟಿ ರೂ. ನಷ್ಟವಾಗಿದೆ. 383 ಟ್ರಾನ್ಸ್ಫರ್ಮರ್‌ಗಳಿಗೆ ಹಾನಿಯಾಗಿದ್ದು ಪ್ರತಿ ಟ್ರಾನ್ಸ್ಫರ್ಮರ್‌ಗೆ 1 ಲಕ್ಷದಂತೆ 3.83 ಕೋಟಿ ರೂ. ನಷ್ಟವಾಗಿದೆ. 30.57 ಲಕ್ಷ ರೂ.ಗಳ 61.14 ಕಿಮೀ ಲೈನ್ ಹಾನಿಯಾಗಿದೆ ಎಂದು ಹೆಸ್ಕಾಂ ವರದಿ ತಿಳಿಸಿದೆ.