More

    ಆ.10 ರಿಂದ ಎಸ್ಕಾಂ, ಕೆಪಿಟಿಸಿಎಲ್ ಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

    ಕಾರವಾರ: ಕಾಯಮಾತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 10 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸಲಾಗು ಎಂದು ಕರ್ನಾಟಕ ರಾಜ್ಯ ಮತ್ತು ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಲೀಲಾ ಸಾಗರ ಎಂ.ಎಸ್. ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಎಸ್ಕಾಂ ಹಾಗೂ ಕೆಪಿಟಿಸಿಎಲ್ ಗಳಲ್ಲಿ 16 ಸಾವಿರ ಜನರು ಹೊರ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಸ್ಟೇಶನ್ ಆಪರೇಟರ್, ಸ್ಟೇಶನ್ ಸಹಾಯಕರು, ಗ್ಯಾಂಗ್ ಮನ್ ಗಳು, ಹೊರ ಗುತ್ತಿಗೆಯಲ್ಲಿ ನಿರ್ವಹಿಸುತ್ತಿದ್ದೇವೆ. ಆದರೆ,
    ಆರೋಗ್ಯ ವಿಮೆ, ಅಪಘಾತ ವಿಮೆ ಇಲ್ಲ. ರಾಜ್ಯದಲ್ಲಿ ಸಬ್ ಸ್ಟೇಷನ್ ನಲ್ಲಿ ಅಪಘಾತವಾಗಿ ಕಳೆದ ವರ್ಷಗಳಲ್ಲಿ 350 ಜನರ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 1 ಲಕ್ಷ ಪರಿಹಾರ ನೀಡಿ ಕೈ ಬಿಡಲಾಗುತ್ತಿದೆ. ಶೇ. 50 ರಷ್ಟು ಅಂಗವೈಕಲ್ಯವಾದ 272 ಜನರಿದ್ದಾರೆ. ಅವರಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. 20 ವರ್ಷದಿಂದ ಕೆಲಸ ಮಾಡುತ್ತಿದ್ದರೂ ಕಾಯಮಾತಿ ಇಲ್ಲ. ಇದರಿಂದ, ಸೌಲಭ್ಯ ಕಲ್ಪಿಸಲು, ಕಾಯಮಾತಿಗೆ ಸರ್ಕಾರಕ್ಕೆ ಜು. 31 ಕ್ಕೆ ಗಡುವು ನೀಡಲಿದ್ದೇವೆ. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ಸರ್ಕಾರ ಬೇಡಿಕೆ ಈಡೇರಿಸದೇ ಇದ್ದಲ್ಲಿ ಹೋರಾಟ ಖಚಿತ ಎಂದರು.
    ಬೇಡಿಕೆಗಳು:
    ಹೊರ ಗುತ್ತಿಗೆ ಮೌಕರರನ್ನು ಕಾಯಮಾತಿ ಮಾಡಬೇಕು. ವರ್ಷಗಳ ಹಿಂದೆ ವಜಾ ಮಾಡಿದ ನೌಕರರನ್ನು ಪುನಃ ನೇಮಕ ಮಾಡಬೇಕು. ಕೆಲಸದ ಸ್ಥಳದಲ್ಲಿ ಅಪಘಾತವಾದರೆ, 25 ಲಕ್ಷ ರೂ. ಪರಿಹಾರ ನೀಡಬೇಕು. ಅಪಘಾತವಾದರೆ, ಆಸ್ಪತ್ರೆ ಖರ್ಚು ವೆಚ್ವ ಭರಿಸಬೇಕು. ಪ್ರತಿ ತಿಂಗಳು ಐದನೇ ತಾರಿಕಿಗೆ ವೇತನವಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

    ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್ ಹಂಚುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಅಂದರ್!

    ಕಾರವಾರದ ಗಜೇಂದ್ರ ಗುನಗಾ ಮಾತನಾಡಿ, ನಮಗೆ ಸರಿಯಾದ ಸಮಯಕ್ಕೆ ವೇತನವಿಲ್ಲ‌. ವೇತನದಲ್ಲಿ ಇಎಸ್ ಐ ಕಡಿತವಾಗುತ್ತಿದೆ. ಆದರೆ, ಇಎಸ್ ಐ ಕಾರ್ಡ್ ಕೊಟ್ಟಿಲ್ಲ. ಯಾರಿಗೂ ಸೌಲಭ್ಯ ಸಿಕ್ಕಿಲ್ಲ ಎಂದರು.
    ಜ್ಞಾನೇಶ್ವರ ಕೊಳಂಬಕರ್ ಮಾತನಾಡಿ,
    ಉತ್ತರಕನ್ನಡದಲ್ಲಿ 28 ವಿದ್ಯುತ್ ಸಬ್ ಸ್ಟೇಷನ್ ಇದೆ. ಅದರಲ್ಲಿ 700 ರಷ್ಟು Saab ಕಾರ್ಯ ನಿರ್ವಹಿಸುತ್ತಿದ್ದಾರೆ. 350 ಕ್ಕೂ ಅಧಿಕ ಜನ ನೇಮಕಾತಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದರು.
    ನೇಮಕಾತಿ ಪತ್ರದಲ್ಲಿ ಇದ್ದಷ್ಟು ವೇತನ ನೀಡುವುದಿಲ್ಲ. ಮೂರ್ನಾಲ್ಕು ಸಾವಿರ ಹಿಡಿದಿಟ್ಟುಕೊಂಡು ಕೊಡಲಾಗುತ್ತದೆ. ಕೇಳಿದರೆ, ಕೆಲಸದಿಂದ‌ ತೆಗೆಯಲಾಗುತ್ತದೆ ಎಂದರು.
    ನಾಗಪ್ಪ ಬಾವಿಕಟ್ಟೆ, ಈಶ್ವರ ನಾಯ್ಕ ಭಟ್ಕಳ,
    ಜ್ಞಾನೇಶ್ವರ ಕೊಳಂಬಕರ್, ಪ್ರೇಮಾನಂದ ನಾಯ್ಕ, ಯೋಗೇಶ ದೇವದಾಸ, ರಾಘವೇಂದ್ರ ನಾಯ್ಕ, ಸುನೀಲ ನಾಗೇಕರ್ , ಮನೋಹರ್, ಸತ್ಯವಾನ್ ಮಾಗೇಕರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts