ಕಾರವಾರ /Heat waves : ತಾಲೂಕಿನ ಸದಾಶಿವಗಡ ಹೋಬಳಿಯಲ್ಲಿ ಮಂಗಳವಾರ ರಾಜ್ಯದಲ್ಲಿಯೇ ಅತ್ಯಽಕ ತಾಪಮಾನ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ನೀಡಿದ ವರದಿಯಂತೆ ಸದಾಶಿವಗಡದಲ್ಲಿ 25 ರಂದು ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಽಯಲ್ಲಿ 41.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಕಾರವಾರ, ಘಾಡಸಾಯಿ, ಮಿರ್ಜಾನ್ ಹಾಗೂ ಹೊನ್ನಾವರ ಹೋಬಳಿಯಲ್ಲಿ 40 ಡಿಗ್ರಿ ಸೆಲ್ಶಿಯಸ್, ಅಂಕೋಲಾ-39.8, ಮಾವಿನಕುರ್ವೆಯಲ್ಲಿ 39.7 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಒಟ್ಟಾರೆ ಕಾರವಾರ ತಾಲೂಕಿನ ಸರಾಸರಿ 38 ಡಿಗ್ರಿ ಸೆಲ್ಶಿಯಸ್ ಉಷ್ಣಾಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡದ 4, ಉಡುಪಿ ಜಿಲ್ಲೆಯ 2 ಹಾಗೂ ರಾಯಚೂರು ಜಿಲ್ಲೆಯ 1 ಸ್ಥಳದಲ್ಲಿ 39 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉತ್ತರ ಕನ್ನಡದ 6 ಸ್ಥಳಗಳಲ್ಲಿ 39 ಡಿಗ್ರಿಗಿಂತ ಹೆಚ್ಚು ಸೆಕೆ ಇದೆ. ಕಾರವಾರ ತಾಲೂಕಿನ ಫೆಬ್ರವರಿ ತಿಂಗಳ ಗರಿಷ್ಠ ಸರಾಸರಿ ಉಷ್ಣಾಂಶ 33 ಡಿಗ್ರಿ ಸೆಲ್ಶಿಯಸ್ ಇದೆ. ಎಂದರೆ ಸಾಮಾನ್ಯಕ್ಕಿಂತ ಸುಮಾರು 5 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಹೆಚ್ಚಾದಂತಾಗಿದೆ. ಕಾರವಾರದಲ್ಲಿ 2009 ರ ಫೆ. 21 ರಂದು 39.1 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ತಾಲೂಕಿನ ಸಾರ್ವಕಾಲಿಕ ದಾಖಲೆ ತಾಪಮಾನವಾಗಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ 2017 ರ ಫೆ.16 ರಂದು 38.4 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಅದು ದಾಖಲೆಯಾಗಿದೆ.
ಸೋಮವಾರವೂ ಕಾರವಾರ ಹಾಗೂ ಜಿಲ್ಲೆಯ ಇತರ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಸೆಕೆ ಕಾಣಿಸಿಕೊಂಡಿತ್ತು. ಮುಂದಿನ ಐದು ದಿನಗಳವರೆಗೂ ಜಿಲ್ಲೆಯ ವಿವಿಧೆಡೆ ಭಾರಿ ಉಷ್ಣಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ ಗಾಳಿ (Heat waves )ಬೀಸಲುದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆಗಳನ್ನು ನೀಡಲಾಗಿದೆ.