ತಾವರಗೇರಾ ಸಮೀಪದ ಹಿರೇಮುಕರ್ತನಾಳ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು. ರಾಮಣ್ಣ ಮುರಡಿ, ದೇವಪ್ಪ, ವೆಂಕಟೇಶ, ಬಸವರಾಜ, ಶರಣಪ್ಪ ಇತರರಿದ್ದರು. 
ಜಿಲ್ಲೆ

ಆರೋಗ್ಯ ಸಂಪತ್ತು ಗಳಿಸಿ

Kopala - Desk - Eraveni

ತಾವರಗೇರಾ: ಸಮೀಪದ ಹಿರೇಮುಕರ್ತನಾಳ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಜಾನಪದ ಕಲಾ ತಂಡದವರಿಂದ ಬುಧವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟೇಶ ಬಯಾಪೂರು ಮಾತನಾಡಿ, ಹಣ ಸಂಪಾದಿಸುವ ಬದಲು ಉತ್ತಮ ಆರೋಗ್ಯ ಗಳಿಸಿ ಸದೃಢರಾಗಿ. ಸಾರ್ವಜನಿಕರು ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಸೌಲಭ್ಯ ಪಡೆದುಕೊಳ್ಳಿ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ನಾಗಲೀಕರ್, ಆರೋಗ್ಯ ಅಧಿಕಾರಿ ರಮೇಶ ಅಳ್ಳಳ್ಳಿ, ಅಂಗನವಾಡಿ ಕಾರ್ಯಕರ್ತೆಯರು, ಅಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜನಪದ ತಂಡದ ಕಲಾವಿದರಾದ ರಾಮಣ್ಣ ಮುರಡಿ, ದೇವಪ್ಪ ಟೆಂಗುಂಟಿ, ಶರಣಪ್ಪ ಬನ್ನಿಗೊಳ ಸೇರಿ ಇತರರು ನಾಟಕ ಪ್ರದರ್ಶಿಸಿದರು.