More

    ಮಹಿಳೆಯರ ಆರೋಗ್ಯದಲ್ಲಿ ಕಂಡುಬರುವ ಈ ಸೂಚನೆಗಳು ಸಕ್ಕರೆ ಕಾಯಿಲೆಯ ಲಕ್ಷಣಗಳಾಗಿವೆ…

    ಮಧುಮೇಹ ಅಥವಾ ಸಕ್ಕರೆ ಕಾಯಿಲೆಯು ದೀರ್ಘಕಾಲದವರೆಗೆ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ನಾವು ಹೆಚ್ಚೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇನ್ಸುಲಿನ್ ಪ್ರಮಾಣ ಕಡಿಮೆಯಾದಾಗ ಈ ರೋಗವು ಸಂಭವಿಸುತ್ತದೆ.

    ಪ್ರತಿ ವರ್ಷ ಸುಮಾರು 10 ಲಕ್ಷ ಜನರು ಸಕ್ಕರೆ ರೋಗಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರಂದ್ರೆ, ಈ ರೋಗ ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಹೀಗಾಗಿ ಈ ರೋಗದ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಿರಬೇಕು. ಅದರಲ್ಲೂ ಮಹಿಳೆಯರು ಹೆಚ್ಚು ಹುಷಾರಾಗಿರಬೇಕು.

    ಮಾಮೂಲಿಯಂತೇ ಸಹಜವಾಗಿ ತಿನ್ನುತ್ತಿದ್ದರೂ ಮಹಿಳೆಯರು ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇನ್ಸುಲಿನ್ ಕೊರತೆಯಿಂದ ಗ್ಲೂಕೋಸ್, ಜೀವಕೋಶಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ದೇಹವು ಶಕ್ತಿಗಾಗಿ ಸ್ನಾಯುಗಳನ್ನು ಒಡೆಯುತ್ತದೆ ಮತ್ತು ಶಕ್ತಿಯನ್ನಾಗಿ ಪರಿವರ್ತಿಸುವುದರಿಂದ ತ್ವರಿತವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

    ಅತಿಯಾದ ಬಾಯಾರಿಕೆ ಮತ್ತು ಪದೇಪದೆ ಮೂತ್ರವಿಸರ್ಜನೆ ಮಾಡುವುದು ಮಧುಮೇಹದ ಆರಂಭಿಕ ಚಿಹ್ನೆಗಳು ಎಂದು ಹೇಳಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಮೂತ್ರನಾಳಗಳು ಅದನ್ನು ಫಿಲ್ಟರ್ ಮಾಡಲು ಇನ್ನಷ್ಟು ಶ್ರಮಿಸುತ್ತವೆ. ಇದರಿಂದ ಹೆಚ್ಚು ನೀರು ಕುಡಿಯುವ ಬಯಕೆಯಾಗುತ್ತದೆ. ಪರಿಣಾಮ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಕೆಲವೊಮ್ಮೆ ರಾತ್ರಿಯ ವೇಳೆ ಪದೇಪದೆ ಬಾತ್​ರೂಮ್​ಗೆ ಓಡಾಡಬೇಕಾಗುತ್ತದೆ. ಈ ಎಲ್ಲ ಕಾರಣದಿಂದಾಗಿ ನಿದ್ರೆಗೆ ಭಂಗ ಉಂಟಾಗುತ್ತದೆ ಮತ್ತು ಒಬ್ಬ ವ್ಯಕ್ತಿಯು ಆಲಸ್ಯವನ್ನು ಅನುಭವಿಸುತ್ತಾನೆ.

    ಒಂದು ಕಡೆ ಒಳ್ಳೆಯ ಆಹಾರ ಸೇವಿಸಿದರೂ ದೇಹಕ್ಕೆ ಬೇಕಾದ ಶಕ್ತಿ ಸಿಗುವುದಿಲ್ಲ. ಇದರಿಂದ ಹೆಚ್ಚು ಆಹಾರ ಬಯಕೆ ಆಗುತ್ತದೆ. ಅಂದರೆ, ಯಾವಾಗಲೂ ಹಸಿವನ್ನು ಅನುಭವಿಸುತ್ತೀರಿ. ತಿಂದ ಕೂಡಲೇ ಮತ್ತೆ ಏನನ್ನಾದರೂ ತಿನ್ನಬೇಕೆಂಬ ಹಂಬಲ ನಿಮ್ಮಲ್ಲಿ ಮೂಡುತ್ತದೆ. ಕೆಲವರಲ್ಲಿ ದೃಷ್ಟಿ ಮಂದವಾಗುತ್ತದೆ. ಆಯಾಸ ಮತ್ತು ಆಲಸ್ಯದ ಭಾವನೆ ಮೂಡುತ್ತದೆ ಹಾಗೂ ಕೈ-ಕಾಲುಗಳು ಜಡವಾಗುತ್ತದೆ. ಮಧುಮೇಹದ ಲಕ್ಷಣಗಳಿರುವವರಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುವುದಿಲ್ಲ. ಹೀಗಾಗಿ ಇಂತಹ ಸೂಚನೆಗಳು ಬಂದಾಗ ಎಚ್ಚರಿಕೆ ವಹಿಸುವುದು ಸೂಕ್ತ. (ಏಜೆನ್ಸೀಸ್​)

    ರಜಿನಿಕಾಂತ್​ 170 ಚಿತ್ರದ ಶೂಟಿಂಗ್​ ವೇಳೆ ನಟಿ ರಿತಿಕಾ ಸಿಂಗ್​ಗೆ ಪೆಟ್ಟು

    ರಾಜ್ಯದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಕಳಿಸಲು ಕಸರತ್ತು; ಕೆಪಿಸಿಸಿ ಪ್ರಯತ್ನಕ್ಕೆ ಸಿಗುವುದೇ ಹೈಕಮಾಂಡ್ ಮನ್ನಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts