ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸಂಬಂಧಿತ ಉಚಿತ ಶಿಬಿರಗಳನ್ನು ಸೇವಾ ಸಂಸ್ಥೆಗಳು ನಡೆಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನಗರದ ಸೌಲಭ್ಯ ಉಚಿತವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಹಿರಿಯ ವೈದ್ಯ ಡಾ.ಚಂದ್ರಕಾಂತ್ ಭಟ್ ಹೇಳಿದರು.
ಮಾನಂಪಾಡಿ ಶಾಲೆಯಲ್ಲಿ ಮೂಲ್ಕಿ ಲಯನ್ಸ್ ಕ್ಲಬ್ ಲಿಯೋ ಕ್ಲಬ್ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣೆ, ಕನ್ನಡಕ ವಿತರಣೆ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಶತಮಾನೋತ್ಸವ ಸಮಿತಿ ಅಧ್ಯಕ್ಷ ನವೀನ್ ಶೆಟ್ಟಿ, ಲಯನ್ಸ್ ವಲಯಾಧ್ಯಕ್ಷ ರೋಲ್ಪಿ ಡಿಕೋಸ್ತಾ, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಕೆ.ಎಸ್ ಹೆಗ್ಡೆ ಆಸ್ಪತ್ರೆ ಡಾ.ಪುನೀತ್ ಹೆಗ್ಡೆ, ಬ್ಯಾಂಕ್ ಆಫ್ ಬರೋಡದ ಶಾಖಾ ಪ್ರಬಂಧಕ ಸಚಿನ್ ಶೆಟ್ಟಿ, ಮೂಲ್ಕಿ ಲಯನ್ಸ್ ಪದಾಧಿಕಾರಿಗಳಾದ ಶೀತಲ್ ಸುಶೀಲ್, ಸುಶೀಲ್ ಎಸ್.ಬಂಗೇರ, ಲಿಯೋ ಅಧ್ಯಕ್ಷೆ ನಿಖಿತಾ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುದೀಶ್ ಶೆಟ್ಟಿ, ಶಿಕ್ಷಕಿ ಶೋಭ ಉಪಸ್ಥಿತರಿದ್ದರು.