ಕುಕನೂರು: ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸಲು ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಾಪಂ ಇಒ ರಾಮಣ್ಣ ದೊಡ್ಮನಿ ಹೇಳಿದರು.
ತಾಲೂಕಿನ ನೆಲಜೇರಿ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ರೋಜಗಾರ ದಿನಾಚರಣೆಯಲ್ಲಿ ಬುಧವಾರ ಮಾತನಾಡಿದರು.
ನರೇಗಾ ಕೂಲಿಕಾರರು ಬಹಳಷ್ಟು ಶ್ರಮದಿಂದ ಪ್ರತಿದಿನ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸ ಮಾಡುವ ಕೂಲಿಕಾರರು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಹೊಗುವ ಬದಲಾಗಿ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಮತ್ತು ಕೆಎಚ್‌ಪಿಟಿ ತಾಂತ್ರಿಕ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ
ಸಕ್ಕರೆ ಕಾಯಿಲೆ, ಬಿಪಿ, ಟಿಬಿ ಸೇರಿ ಇತರ ಕಾಯಿಲೆಗಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಧಾರ್ ಲಿಂಕ್ ಮಾಡಿಸಿದ ಕೂಲಿಕಾರರ ಬಾಂಕ್ ಖಾತೆಗಳಿಗೆ ಮಾತ್ರ ಕೂಲಿ ಹಣ ಸರಿಯಾಗಿ ಪಾವತಿಯಾಗುತ್ತದೆ. ಇದರಿಂದ ಎಲ್ಲ ಕೂಲಿಕಾರರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಿಸಿ ಎಬಿಪಿಎಸ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ 1100 ಕೂಲಿಕಾರರು ಆರೋಗ್ಯ ತಪಾಸಣೆ ನಡೆಯಿತು. ಪಿಡಿಒ ನೀಲಂ ಚಳಗೇರಿ, ಆರೋಗ್ಯ ಅಧಿಕಾರಿಗಳಾದ ಈಶ್ವರ್ ರಾಠೋಡ, ಮಂಗಳಾ ಬಸವೇಶ್ವರ ಜತ್ತಿ ಇದ್ದರು.