ಜಿಲ್ಲೆ

ಎಂಆರ್‌ಪಿಎಲ್‌ನಿಂದ ಆರೋಗ್ಯ ತಪಾಸಣೆ

ಸೌಮ್ಯ ಆರ್

ಸುರತ್ಕಲ್: ಕಾಲಕಾಲ ಸರಿಯಾಗಿ ಆರೋಗ್ಯ ತಪಾಸಣೆ ವಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಮಹಾನಗರ ಪಾಲಿಕೆ ಐಎಎಸ್ ಪ್ರೊಬೆಷನರ್ ಶ್ರವಣ್ ಕುವಾರ್ ಹೇಳಿದರು.

ಎಂ.ಆರ್.ಪಿ.ಎಲ್. ಸಂಸ್ಥೆಯ ವತಿಯಿಂದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಅಂಗವಾಗಿ ಸುರತ್ಕಲ್ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ವಾತನಾಡಿದರು.

ಎಂ.ಆರ್.ಪಿ.ಎಲ್. ಸಂಸ್ಥೆ ಪೌರ ಕಾರ್ಮಿಕರಿಗೆ ಆರೋಗ್ಯ ಸೇವೆ ಕೊಡಬೇಕು ಎಂಬ ಸದುದ್ದೇಶದಿಂದ ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಕಾರ್ಯಕ್ರಮ ಆಯೋಜನೆ ವಾಡಿದ್ದು, ಇದರ ಸದುಪಯೋಗವನ್ನು ಪಡೆದು, ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಎಂ.ಆರ್.ಪಿ.ಎಲ್. ಸಂಸ್ಥೆಯ ಸಿ.ಎಸ್.ಆರ್. ವಿಭಾಗದ ಜನರಲ್ ವ್ಯಾನೇಜರ್ ಪ್ರಶಾಂತ್ ಬಾಳಿಗ ವಾತನಾಡಿ, ಸೆ.17ರಿಂದ ಅ.2ರವರೆಗೆ ಸಚ್ಛತಾ ಹಿ ಸೇವಾ ಅಂಗವಾಗಿ ಚಿತ್ರಾಪುರ, ಪಣಂಬೂರು ಮತ್ತಿತರ ಕಡೆಗಳಲ್ಲಿ ಬೀಜ್ ಸ್ವಚ್ಛತೆ, ಪೆರ್ಮುದೆ, ಜೋಕಟ್ಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹೀಗೆ ಹತ್ತು ಹಲವು ಸಾವಾಜಿಕ ಚಟುವಟಿಕೆಗಳು ನಿರಂತರ ನಡೆಯುತ್ತಿವೆ ಎಂದರು.

ನಗರಪಾಲಿಕೆ ಆರೋಗ್ಯಾಧಿಕಾರಿ ಸಂಜಯ್, ಕೆ.ಎಂ.ಸಿ. ಸಂಯೋಜಕ ಹರ್ಬಟ್ ಮತ್ತಿತರರಿದ್ದರು. ಎಂ.ಆರ್.ಪಿ.ಎಲ್. ಅಧಿಕಾರಿ ಸ್ಟೀವನ್ ಪಿಂಟೋ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಪೌರ ಕಾರ್ಮಿಕರು ಪಾಲ್ಗೊಂಡಿದ್ದು, ಸಂಸ್ಥೆ ವತಿಯಿಂದ ಎಲ್ಲರಿಗೂ ಆರೋಗ್ಯ ಕಿಟ್ ವಿತರಿಸಲಾಯಿತು. ಅಗತ್ಯವಿದ್ದವರಿಗೆ ಉಚಿತ ಔಷಧ ಮತ್ತು ಕನ್ನಡಕ ವಿತರಿಸಲಾಯಿತು.