ಜಿಲ್ಲೆ

ಹಾಸನದಲ್ಲಿ ಟ್ರಕ್​ ಟರ್ಮಿನಲ್​ ವಿವಾದ: ಎಚ್​.ಡಿ.ರೇವಣ್ಣ ಹೋರಾಟಕ್ಕೆ ಮಗನ ಸಾಥ್​

mahalakshmihm

ಹಾಸನ: ಟ್ರಕ್​ ಟರ್ಮಿನಲ್​ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಕೈಗೊಂಡ ಪ್ರತಿಭಟನೆಯಲ್ಲಿ ಎಚ್​.ಡಿ.ರೇವಣ್ಣ ಭಾಗಿಯಾಗುವ ಮೂಲಕ ಗಂಭೀರ ಸ್ವರೂಪ ಪಡೆದುಕೊಂಡಿತು.

ಕಾಮಗಾರಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದರು ಆದರೂ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಮುಂದಾದ ಕೂಡಲೇ ಸ್ಥಳಕ್ಕಾಗಮಿಸಿದ ರೇವಣ್ಣ ಅವರು ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.

ಆದರೂ ಕಾಮಗಾರಿ ಮುಂದುವರಿಸಲು ಹೋದಾಗ ಪಟ್ಟು ಬಿಡದೇ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಎಸ್ಪಿ ಆರ್.ಶ್ರೀನಿವಾಸ್‌ಗೌಡ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತಾದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಇನ್ನು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ, ಡಿಸಿ ಸ್ಥಳಕ್ಕಾಗಮಿಸಬೇಕೆಂದು ತಾಕೀತು ಮಾಡಿದರು.ಕೆಲಸ ನಿಲ್ಲಿಸಿ, ಇಲ್ಲ ನಾವೇ ನಿಲ್ಲಸಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.