ಜಿಲ್ಲೆ

VIDEO| ನಮ್ಮ ದೃಷ್ಟಿಯಂತೆ ಸೃಷ್ಟಿ, ನಾವು ಬದಲಾಗೋಣ: ಜನರಲ್ಲಿ ಬಾಲಕಿ ಮನವಿ

ಹಾವೇರಿ: ಮಹಾಮಾರಿ ಕರೊನಾ ವೈರಸ್​ ಕುರಿತು ಹಾವೇರಿಯ ಪುಟ್ಟ ಬಾಲಕಿಯೊಬ್ಬಳು ಮನಮುಟ್ಟುವ ಸಂದೇಶವನ್ನು ಜನರಿಗೆ ರವಾನಿಸಿದ್ದಾಳೆ.

ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಬಾಲಕಿ ವಚನಾ ಚಿಲ್ಲೂರಮಠ ಮಾನವೀಯ ಸಂದೇಶ‌ವನ್ನು ಸಾರಿದ್ದಾಳೆ. ಕರೊನಾ ಸೋಂಕಿತ ವ್ಯಕ್ತಿಗಳನ್ನು ಸಮಾಜದಲ್ಲಿ ನೋಡುವ ದೃಷ್ಟಿ ಬದಲಾಗಿದೆ. ಕರೊನಾ ಬಂದ ವ್ಯಕ್ತಿಗಳನ್ನು ಕೀಳಾಗಿ ಕಾಣಬೇಡಿ. ಅವರು ನಮ್ಮಂತ ಮನಷ್ಯ ರಲ್ಲವೇ? ಕರೊನಾ ಬಂದವರು ಏನ್ ಕೊಲೆ ಮಾಡಿದವರೆ, ಅಪರಾಧಿಗಳೇ..? ಎಂದು ಪ್ರಶ್ನಿಸಿದ್ದಾಳೆ.

ಕೆಲವು ದಿನ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್​ ತೆಗೆದುಕೊಂಡು ಗುಣಮುಖರಾಗುತ್ತಾರೆ. ನಮ್ಮ ದೃಷ್ಟಿಯಂತೆ ಸೃಷ್ಟಿ. ನಾವು ಬದಲಾಗೋಣ ಎಂದು ಬಾಲಕಿ ಜನರಲ್ಲಿ ಮನವಿ ಮಾಡಿದ್ದಾಳೆ. (ದಿಗ್ವಿಜಯ ನ್ಯೂಸ್​)