ಜಿ.ಹರೀಶ್ 
ಜಿಲ್ಲೆ

ಜೂಜುಕೋರರ ಹಾವಳಿಯಿಂದ ಶೈಕ್ಷಣಿಕ ಮಟ್ಟ ಕುಸಿತ

ಹಟ್ಟಿಚಿನ್ನದಗಣಿ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್, ಗಾಂಜಾ ಮಾರಾಟ, ಜೂಜಾಟದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರವೇ ದೊಡ್ಡ ಹೊಡೆತಕ್ಕೆ ಒಳಗಾಗುತ್ತಿದೆ. ಹೀಗಾಗಿ ಜೂಜುಕೂರನ್ನು ಗಡಿಪಾರು ಮಾಡುವ ಚಿಂತನೆ ಇದೆ ಎಂದು ಒಂದನೇ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಿ.ಹರೀಶ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ವಿಜಯವಾಣಿ ಪತ್ರಿಕೆಯೊಂದಿಗೆ ಮಾತನಾಡಿ, ಜೂಜಾಟ ಕುರಿತು ಕಚೇರಿಗೆ ಸಾಕಷ್ಟು ದೂರುಗಳು ಬಂದಿವೆ. ಎಸ್ಪಿ ಎಂ.ಪುಟ್ಟಮಾದಯ್ಯ ಅವರು ಹಟ್ಟಿ ಪಟ್ಟಣದ ಮೇಲೆ ಬಾರಿ ನಿಗವಹಿಸಿದ್ದಾರೆ. ಜೂಜುಕೋರರ ಹೆಡೆಮುರಿ ಕಟ್ಟಲು ಖಾಕಿಪಡೆ ತಯಾರಿ ನಡೆಸಿದೆ ಎಂದರು.

ಜೂಜಾಟದ ಚಟಕ್ಕೆ ಒಳಗಾದದವರು ಅಕ್ರಮ ಆಟಗಳಿಗೆ ತೊಡಗಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮನೆಯ ಅಡುಗೆ, ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಪೂರೈಸಲು ಸಾಧ್ಯವಾಗದೆ ಮಕ್ಕಳನ್ನು ವಿದ್ಯಾಭ್ಯಾಸ ಬಿಟ್ಟು ಕೂಲಿ ಕೆಲಸಕ್ಕೆ ತಳ್ಳುವ ದುಸ್ಥಿತಿ ಉಂಟಾಗಿದೆ. ಜೂಜಾಟವೂ ಕೇವಲ ಆರ್ಥಿಕ ಸಂಕಷ್ಟವನ್ನೇ ತರದೇ, ಸಮಾಜದಲ್ಲಿ ಅಸ್ಥಿರತೆಯನ್ನುಂಟುಮಾಡುತ್ತಿದೆ. ಹಾಗಾಗಿ ಯುವ ಪೀಳಿಗೆಯ ಭವಿಷ್ಯ ಉಳಿಸುವ ಜವಬ್ದಾರಿ ಪೋಲಿಸ್ ಇಲಾಖೆಯ ಮೇಲಿದೆ ಎಂದರು.