

ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿಬೆಟ್ಟ ಹಿಂಭಾಗ ಅಕ್ರಮವಾಗಿ ಜೂಜಾಡುತ್ತಿದ್ದ ಏಳು ಜನರನ್ನು ಶನಿವಾರ ಅಗರ-ಮಾಂಬಳ್ಳಿ ಠಾಣೆ ಪೊಲೀಸರ ಬಂಧಿಸಿದ್ದಾರೆ.
ತಾಲೂಕಿನ ಹೊಸ ಮಾಲಂಗಿ ಗ್ರಾಮದ ಚೆಲುವನಾಯಕ, ಬಸವರಾಜು, ನಂಜುಂಡಸ್ವಾಮಿ ಟಗರಪುರ ಮೋಳೆ ಗ್ರಾಮದ ಶೇಖರ, ಮಹಾದೇವ, ಚಿನ್ನಸ್ವಾಮಿ, ಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಪಣಕ್ಕಿಟ್ಟಿದ್ದ 11,000 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಇವರು ಚಿಲಕವಾಡಿ ಬೆಟ್ಟದ ಹಿಂಭಾಗ ಜೂಜಾಟದಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿ ಠಾಣೆ ಜಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.