ಹಾಸನ: ರಾಜ್ಯದಲ್ಲಿ ಸರ್ಕಾರಿ ಸಾರಿಗೆ ನೌಕರರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಿಬ್ಬರು ಸಾರಿಗೆ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾಸನದ ಕೆ.ಆರ್. ಪುರಂನಲ್ಲಿ ಸಾರಿಗೆ ಬಸ್ ಅಡ್ಡಲಾಗಿ ಮಲಗಿದ ನೌಕರ ನಾರಾಯಣಗೌಡ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೌಕರನನ್ನು ಠಾಣೆಗೆ ಕರೆದೊಯ್ದರು.
ಠಾಣೆಯಲ್ಲೂ ಸಾವಿನ ನಿರ್ಧಾರದಿಂದ ಹೊರಬರದ ನಾರಾಯಣಗೌಡ, ಸೆಲ್ನ ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡರು. ಈ ವೇಳೆ ತೀವ್ರ ರಕ್ತಸ್ರಾವವಾದ ಕಾರಣ ಕೂಡಲೇ ನಾರಾಯಣ ಗೌಡರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿರಿ: ಗೆಸ್ಟ್ಹೌಸ್ನಲ್ಲಿ ಲವರ್ ಜತೆ ಒಂದು ರಾತ್ರಿ! ಯುವತಿಯ ನಿಗೂಢ ಸಾವು ಪ್ರಕರಣದ ಸತ್ಯಾಂಶ ಕೊನೆಗೂ ಬಯಲು
ಇನ್ನೊಂದೆಡೆ ಮನೆಯಲ್ಲಿ ನೌಕರ ಹೇಮಂತ್ ಕುಮಾರ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ನಿನ್ನೆ ಪ್ರತಿಭಟನೆ ವೇಳೆ ನೌಕರ ಕೆ.ಕೆ.ಪಾಲಾಕ್ಷ ಎಂಬುವರು ವಿಷ ಸೇವಿಸಿದ್ದರು. ಹಾಸನ ಜಿಲ್ಲೆಯಲ್ಲಿ ಮೂವರು ಸಾರಿಗೆ ನೌಕರರು ಆತ್ಮಹತ್ಯೆಗೆ ಯತ್ನಿಸಿದಂತಾಗಿದೆ. (ದಿಗ್ವಿಜಯ ನ್ಯೂಸ್)