ಜಿಲ್ಲೆ

ಕೇವಲ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ​ ಪೇದೆಯ ಅಕಾಲಿಕ ಮರಣದಿಂದ ಮುಗಿಲು ಮುಟ್ಟಿದ ಆಕ್ರಂದನ

ಹಾಸನ: ಐದು ದಿನಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಚಿಕಿತ್ಸೆ ಫಲಕಾರಿಯಾಗದೇ ಇಂದು (ಬುಧವಾರ) ಸಾವಿಗೀಡಾಗಿದ್ದಾರೆ.

ಮೋಹನ್ ಕುಮಾರ್(32) ಮೃತ ದುರ್ದೈವಿ. ಐದು ದಿನದ ಹಿಂದೆ ಬೈಕ್​ನಲ್ಲಿ ಪೊಲೀಸ್​ ಠಾಣೆಗೆ ಹೋಗುವಾಗ ಹಾಸನದ ಕಂದಲಿ ಬಳಿ ಅಪಘಾತವಾಗಿತ್ತು. ತಕ್ಷಣ ಚಿಕಿತ್ಸೆಗಾಗಿ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಮೋಹನ್​ ಕುಮಾರ್​ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕರೊನಾ ಲಾಕ್‌ಡೌನ್ ಆದಾಗಿನಿಂದ ಮೋಹನ್​ ನಿರಂತರವಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಅಕಾಲಿಕ ಮರಣದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)