ಹಾಸನ: ನಿರಂತರ ಮಳೆಯಿಂದಾಗಿ ಹಾಸನ-ಮೈಸೂರು ನಡುವಿನ ಹೆದ್ದಾರಿ ಮೇಲ್ಸೇತುವೆಯ ತಡೆಗೋಡೆ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಬೆಳಿ ಮೇಲ್ಸೇತುವೆಯ ತಡೆಗೋಡೆ ಕುಸಿದು ಮಣ್ಣು ಹೊರ ಬರಲಾರಂಭಿಸಿದ್ದು, ವಾಹನಗಳು ಸಂಚರಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ಥಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ತಡೆಗೋಡೆ ಕುಸಿತವಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಮತ್ತೊಮ್ಮೆ ಇದೇ ಸ್ಥಳದಲ್ಲೆ ತಡೆಗೋಡೆ ಕುಸಿದಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೃಷ್ಣರಾಜಸಾಗರ ಭರ್ತಿಯಾದಲ್ಲಿ ನಗರಕ್ಕಿಲ್ಲ ಜಲ ಸಮಸ್ಯೆ