ಜಿಲ್ಲೆ

ಗಣೇಶ ಹಬ್ಬದಂದು ಬೈಕ್​ ತೊಳೆಯಲು ಬಂದವನ ಬೆನ್ನ ಹಿಂದೆಯೇ ಬಂದ ಜವರಾಯ

ಹಾಸನ: ಗಣೇಶ ಹಬ್ಬದ ದಿನವೇ ಹಾಡು ಹಗಲಲ್ಲೇ ವ್ಯಕ್ತಿಯೊಬ್ಬರನ್ನು ಭೀಕರ‌ವಾಗಿ ಕೊಲೆ ಮಾಡಿರುವ ಘಟನೆ ಹಾಸನ ಹೊರವಲಯದ ನಿಂಗೇಗೌಡನ ಕೊಪ್ಪಲು ಬಳಿ ನಡೆದಿದೆ.

ಹಾಲುವಾಗಿಲು ಗ್ರಾಮದ ಕುಮಾರ್(45) ಕೊಲೆಯಾದ ವ್ಯಕ್ತಿ. ಹಬ್ಬದ‌ ದಿನ ಪೂಜೆ ಗೆಂದು ಬೈಕ್ ತೊಳೆಯಲು ಬಂದವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇದೇ ಗ್ರಾಮದ ಗೋವಿಂಗೇಗೌಡ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

ಬೆಳಿಗ್ಗೆ 10-30ಕ್ಕೆ ಕಂಠಪೂರ್ತಿ ಕುಡಿದು ಬಂದು ಆರೋಪಿ ಗೋವಿಂದೇಗೌಡ ಕೋಡಿಬಿದ್ದ ಕರೆ ನೀರಲ್ಲಿ ಬೈಕ್ ತೊಳೆಯುತ್ತಿದ್ದ ಕುಮಾರ್​ನನ್ನು ಹಿಂಬಂದಿಯಿಂದ ಬಂದು ಕೊಚ್ಚಿ ಕೊಂದಿದ್ದಾನೆ ಎನ್ನಲಾಗಿದೆ.

ಕೊಲೆಮಾಡಿ ಶವದ ಪಕ್ಕದಲ್ಲಿಯೇ ಕೂತಿದ್ದ ಗೋವಿಂದೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)