ಜಿಲ್ಲೆ

ಹರೀಶ ಶೆಟ್ಟಿಗೆ ಹುಟ್ಟೂರ ಸನ್ಮಾನ

ಇಂದಿರಾ ಎನ್ ಕೆ

ಹೆಬ್ರಿ: ಜೀವನದಲ್ಲಿ ಶ್ರಮಪಟ್ಟು ಮೇಲೆ ಬಂದಿದ್ದು, ಕಷ್ಟದ ಅರಿವಿದೆ. ನನ್ನಿಂದ ಸಾಧ್ಯವಿದ್ದಷ್ಟು ನಮ್ಮೂರಿನ ಜನರಿಗೆ ನೆರವಾಗುತ್ತೇನೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಹೇಳಿದರು.

ಜಾಗತಿಕ ಬಂಟರ ಸಂಗಳ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆ ವಿವಿಧ ಸಂ ಸಂಸ್ಥೆಗಳಿಂದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಹುಟ್ಟೂರು ಸನ್ಮಾನ ಸ್ವೀಕರಿಸಿ ವಾತನಾಡಿದರು.

ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಹರೀಶ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.

ಪಡುಕುಡೂರುಬೀಡು ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ನೇತೃತ್ವದಲ್ಲಿ ಪಡುಕುಡೂರು ಶಾಲೆ ಹಳೇ ವಿದ್ಯಾರ್ಥಿ ಸಂ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ, ಮುನಿಯಾಲು ಲಯನ್ಸ್ ಕ್ಲಬ್, ಪಡುಕುಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜನನಿ ಫ್ರೆಂಡ್ಸ್ ಕುಕ್ಕುದಕಟ್ಟೆ, ಪಡುಕುಡೂರು ಸೀಶಕ್ತಿ ಸಂಜೀವಿನಿ ಸಂ ವತಿಯಿಂದ ಹರೀಶ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಪಡುಕುಡೂರು ಪಡುಪರ್ಕಳ ಶಂಕರ ಶೆಟ್ಟಿ, ಮುನಿಯಾಲು ಲಯನ್ಸ್ ಕ್ಲಬ್ ಶಂಕರ ಶೆಟ್ಟಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಭುಜಂಗ ಶೆಟ್ಟಿ, ಲಯನ್ಸ್ ಮುಖಂಡ ಮುನಿಯಾಲು ಗೋಪಿನಾಥ ಭಟ್, ಪಡುಕುಡೂರು ಅಶೋಕ್ ಎಂ ಶೆಟ್ಟಿ, ಪ್ರಮುಖರಾದ ಜಗದೀಶ ಹೆಗ್ಡೆ, ಲೀಲಾವತಿ, ಹೃದಯ ಕುವಾರ್ ಶೆಟ್ಟಿ, ಹರೀಶ ಪೂಜಾರಿ, ರವಿ ಶೆಟ್ಟಿ, ತಾರಾವತಿ ಶೆಟ್ಟಿ, ಸುಧಾಕರ ಶೆಟ್ಟಿ, ಸಂದೀಪ ಶೆಟ್ಟಿ, ಪ್ರಸನ್ನ ಶೆಟ್ಟಿ ಜಯಲೀಲಾ, ಶ್ರೀನಿವಾಸ ಆಚಾರ್ಯ, ಪ್ರವೀಣ್, ವಿವಿಧ ಸಂಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಜಯಲೀಲಾ ಸ್ವಾಗತಿಸಿ, ಸಂದೇಶ ಶೆಟ್ಟಿ ವಂದಿಸಿದರು. ರಂಜಿತಾ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶ ಪೂಜಾರಿ ವಾತಿಬೆಟ್ಟು ನಿರೂಪಿಸಿದರು.