ಜಿಲ್ಲೆ

ಹಿಂದು ನಾಯಕರ ತೇಜೋವಧೆ ಖಂಡನೀಯ : ಶಾಸಕ ಹರೀಶ್ ಪೂಂಜ ಕಿಡಿ

ಸೌಮ್ಯ ಆರ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲು ಮುಂದಾದವರ ಬಗ್ಗೆ ಮಾತನಾಡಿರುವ ಹಿರಿಯರಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ನಿಂದಿಸುವ ಕೆಲಸವನ್ನು ನಗರ ನಕ್ಸಲರು ಮಾಡಿದ್ದಾರೆ. ಇಂತಹ ಹಿಂದು ನಾಯಕರ ಹಾಗೂ ಸಮಾಜದ ತೇಜೋವಧೆ ಮಾಡುವ ಶಕ್ತಿಗಳನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು ಎಂದು ಶಾಸಕ ಹರೀಶ್ ಪೂಂಜ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿರಿಯರಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾಡಿದ ಅವಮಾನ ಇಡೀ ಸ್ವಯಂಸೇವಕ ತಂಡಕ್ಕೆ ಮಾಡಿದ ಅವಮಾನ, ಹಿಂದುಗಳ ನಡುವೆ ಕಂದಕ ಸೃಷ್ಟಿಸಿ, ಹಿಂದು ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೆ ಅವಹೇಳನ, ಹಿಂದು ಭಾವನೆಗಳಿಗೆ ಘಾಸಿಯುಂಟು ಮಾಡುವ, ಹಿಂದು ಸಮಾಜವನ್ನು ಒಡೆಯುವ ನಗರ ನಕ್ಸಲರ ಪಿತೂರಿಯೇ ಈ ನಿಂದನೆ ಆಗಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಜಿಹಾದಿಗಳು, ಮತಾಂಧ ಶಕ್ತಿಗಳ ಮನಸ್ಥಿತಿಯುಳ್ಳವರಾಗಿದ್ದು, ಹಿಂದುಗಳನ್ನು ತೇಜೊವಧೆ ಮಾಡುವವರನ್ನು ಸರ್ಕಾರ ಸುಮೊಟೊ ಪ್ರಕರಣ ಹಾಕದೆ ಬಿಟ್ಡಿರುವುದೇ ಈ ರೀತಿ ಹೇಳಿಕೆ ಕೊಡುವಷ್ಟು ಬೆಳೆದಿದ್ದಾರೆ. ಇಂತಹ ನೀಚ ಮನಸ್ಥಿತಿ ಉಳ್ಳವರನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೊಟ್ಯಾನ್ ಉಪಸ್ಥಿತರಿದ್ದರು.

ಸೌಜನ್ಯಾ ಪ್ರಕರಣ ಮರು ತನಿಕೆಯಾಗಲಿ:

ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಹಿಂದೆಯೇ ಹೋರಾಟ ಮಾಡಿದೆ. ಕರಾವಳಿ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೆೇಟಿಯಾಗಿ ಮನವಿ ನೀಡಿದ್ದೇವೆ. ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಪೊಲೀಸ್ ಇಲಾಖೆಯ ವೈಫಲ್ಯದಿಂದ ಈ ಸ್ಥಿತಿಯಾಗಿದೆ. ಈ ಪ್ರಕರಣದ ಮರು ತನಿಖೆಯಾಗಲಿ, ಎಸ್‌ಐಟಿ ಅಥವಾ ಯಾವುದೇ ಇತರ ತನಿಖಾ ತಂಡ ಮರು ತನಿಖೆಗೆ ಮಾಡಿ ನೈಜ ಆರೋಪಿಗಳು ಪತ್ತೆಯಾಗಿ, ಜೈಲು ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು.